* ಮುಂದಿನ 12 ತಿಂಗಳಲ್ಲಿ ದೇಶದಲ್ಲಿ ಟೆಲಿಕಾಂ ಸಂಪರ್ಕದ ವಿಷಯದಲ್ಲಿ ಶೇಕಡಾ 100 ರಷ್ಟು ಹಳ್ಳಿಗಳ ವ್ಯಾಪ್ತಿಯನ್ನ ತಲುಪುವ ಗುರಿಯನ್ನ ಹೊಂದಲಾಗಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರು ತಿಳಿಸಿದ್ದಾರೆ.* ನಾವು ದೇಶದಲ್ಲಿ ಸುಮಾರು 24,000 ಹಳ್ಳಿಗಳನ್ನು ಗುರುತಿಸಿದ್ದೇವೆ, ಟೆಲಿಕಾಂ ಸಂಪರ್ಕದ ವಿಷಯದಲ್ಲಿ ಇನ್ನೂ ಸ್ಯಾಚುರೇಶನ್ ಅಗತ್ಯವಿದೆ ."* ಹೊಸ ಟೆಲಿಕಾಂ ಕಾಯ್ದೆಯ ನಿಬಂಧನೆಗಳು ಅಗತ್ಯ ಮೂಲಸೌಕರ್ಯಗಳನ್ನ ಸ್ಥಾಪಿಸಲು ಅನುವು ಮಾಡಿಕೊಡುತ್ತದೆ ಮತ್ತು ವಿ-ಸ್ಯಾಟ್ ಮತ್ತು ಉಪಗ್ರಹದಂತಹ ಮಿಶ್ರ ತಂತ್ರಜ್ಞಾನಗಳನ್ನ “12 ತಿಂಗಳಲ್ಲಿ ಶೇಕಡಾ ನೂರರಷ್ಟು ಸ್ಯಾಚುರೇಶನ್ ಗುರಿಯೊಂದಿಗೆ” ಬಳಸಿಕೊಳ್ಳಲಾಗುತ್ತಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.* ಈಶಾನ್ಯ ರಾಜ್ಯಗಳ ಪ್ರದೇಶಗಳು ಈ ಹಳ್ಳಿಗಳಲ್ಲಿ ಸೇರಿವೆ ಮತ್ತು ಈ ಸ್ಥಳಗಳನ್ನ ತಲುಪಲು ಕಾರ್ಯತಂತ್ರಗಳನ್ನ ರೂಪಿಸಲಾಗುತ್ತಿದೆ ಎಂದು ಸಚಿವರು ಸಿಂಧಿಯಾ ಅವರು ತಿಳಿಸಿದರು.