* ಕೆರಿಬಿಯನ್ ನೆಲದಲ್ಲಿ ಟಿ 20 ವಿಶ್ವಕಪ್ ಗೆದ್ದು 3 ದಿನ ತಡವಾಗಿ ಮರುಳಿದ ರೋಹಿತ್ ಪಡೆಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ವಿಶ್ವ ವಿಜೇತರರಿಗೆ ಸನ್ಮಾನ ಮಾಡಿದ ಪ್ರಧಾನಿ ಮೋದಿ ಉಪಹಾರ ಕೂಟ ಆಯೋಜಿಸಿಲಾಗಿತ್ತು.*ಮುಂಬೈನಲ್ಲಿ ಜೂನ್ 04 ರಂದು ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಟೀಂ ಇಂಡಿಯಾಗೆ ತವರಿಗೆ ಅಭಿಮಾನಿಗಳು ಪ್ರೀತಿಯ ಸ್ವಾಗತ ಕೊರಿ ಹೊಸ ದಾಖಲೆ ಬರೆದಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸನ್ಮಾನ ಬಳಿಕ ಮರೀನ್ ಡ್ರೈವ್ ರಸ್ತೆಯಲ್ಲಿನ ವಿಜಯಿ ಯಾತ್ರೆಗೆ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಹಾಜರಾಗಿದ್ದಾರೆ. ಕಿಕ್ಕಿರಿದು ಸೇರಿದ್ದ ಅಭಿಮಾನಿಗಳಿಂದ ಕೆಲವರು ಗಾಯಗೊಂಡಿದ್ದಾರೆ. 5,000 ಪೊಲೀಸರನ್ನು  ನಿಯೋಜಿಸಲಾಗಿತ್ತು. ಹೀಗಾಗಿ ಅಭಿಮಾನಿಗಳ ಸಂಖ್ಯೆ ಹೆಚ್ಚಾದರೂ ಅನಾಹುತಕ್ಕೆ ಅವಕಾಶ ನೀಡಿಲ್ಲ. * ರಾಷ್ಟ್ರ ರಾಜಧಾನಿಗೆ ಬಂದಿಳಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ತೆರಳಿದ ತಂಡಕ್ಕೆ ವಿಶೇಷ ಆತಿಥ್ಯ ನೀಡಲಾಯಿತು.ಭಾರತ ತಂಡಕ್ಕೆ ಮೋದಿ ಅವರು ಅಭಿನಂದನೆ ಸಲ್ಲಿಸಿದರು.* ಟೀಮ್ ಇಂಡಿಯಾ ಮಧ್ಯಾಹ್ನದ ನಂತರ ಮುಂಬೈಗೆ ಪ್ರಯಾಣಿಸಿ ನಾರಿಮನ್ ಪಾಯಿಂಟ್ ನಿಂದ ವಾಂಖೆಡೆ ವರೆಗೆ ತೆರೆದ ಬಸ್ ನಲ್ಲಿ 2.8 ಕಿ.ಮೀ ಮೆರವಣಿಗೆ ಸಾಗಿತು. ಕ್ರೀಡಾಂಗಣದಲ್ಲಿ ಬಿ ಸಿ ಸಿ ಐ ವತಿಯಿಂದ ತಂಡವನ್ನು ಸನ್ಮಾನಿಸಲಾಯಿತು. ಮತ್ತು 125 ಕೋಟಿ ರೂ. ಬಹುಮಾನ ವಿತರಿಸಲಾಯಿತು.