* ದೇಶದ ಅತಿದೊಡ್ಡ ಸಾಮೂಹಿಕ ಅಡುಗೆಮನೆ ನಿರ್ಮಾಣಕ್ಕಾಗಿ ಮುಂಬೈನ ಘೋಡಾಪದೇಯೊ ಪ್ರದೇಶದಲ್ಲಿ ಅಕ್ಷರ ಚೈತನ್ಯ ಸಂಸ್ಥೆಗೆ ಮುಂಬೈ ಬಂದರು ಪ್ರಾಧಿಕಾರವು 30 ಸಾವಿರ ಚದರ ಅಡಿಯ ಭೂಮಿ ನೀಡಿದೆ.* ಈ ಅಡುಗೆಮನೆ 2027ರ ವೇಳೆಗೆ ಪೂರ್ಣಗೊಳ್ಳಲಿದ್ದು, ಸುಮಾರು 1 ಲಕ್ಷ ಜನರಿಗೆ ಇದರ ಪ್ರಯೋಜನ ಸಿಗಲಿದೆ.* ಇದರ ಮೂಲಕ 83 ಸಾವಿರ ಬಾಲವಾಡಿ ಮಕ್ಕಳಿಗೆ, 750ಕ್ಕೂ ಹೆಚ್ಚು ಶಾಲೆಗಳ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು 50ಕ್ಕಿಂತ ಹೆಚ್ಚು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 17 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರತಿದಿನ ಉಚಿತ ಊಟ ಒದಗಿಸಲಾಗುತ್ತದೆ.