* ಮುಖ್ಯಮಂತ್ರಿ, ಸಚಿವರು, ಶಾಸಕರು ಪಡೆಯುವ ವೇತನ ಮತ್ತು ಭತ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಸರ್ಕಾರ ಯೋಜನೆ ರೂಪಿಸಿದೆ.* ರಾಜ್ಯ ಸರ್ಕಾರ ಸಿಎಂ, ಸಚಿವರು, ಶಾಸಕರ ವೇತನ ಇಮ್ಮಡಿಯಷ್ಟು ಹೆಚ್ಚಿಸಲು ನಿರ್ಧರಿಸಿದೆ. ಶಾಸಕರ ವೇತನ ₹40,000 ರಿಂದ ₹80,000, ಸಚಿವರದು ₹60,000 ರಿಂದ ₹1.25 ಲಕ್ಷ, ಸಿಎಂ ವೇತನ ₹75,000 ರಿಂದ ₹1.50 ಲಕ್ಷ ಆಗಲಿದೆ.* ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿಧಾನಸಭಾಧ್ಯಕ್ಷರು, ಸಭಾಪತಿ, ವಿರೋಧ ಪಕ್ಷದ ನಾಯಕರು, ಮುಖ್ಯ ಸಚೇತಕರ ವೇತನ, ಭತ್ಯೆ ಹೆಚ್ಚಳದಿಂದ ₹ 50 ಕೋಟಿ, ಮುಖ್ಯಮಂತ್ರಿ, ಸಚಿವರುಗಳ ವೇತನ ಭತ್ಯೆ ಹೆಚ್ಚಳದಿಂದ ₹ 10 ಕೋಟಿ ಸೇರಿ ರಾಜ್ಯಕ್ಕೆ ವಾರ್ಷಿಕ ₹ 62 ಕೋಟಿ ಹೆಚ್ಚುವರಿ ಹೊರೆ ಅಂದಾಜಿಸಲಾಗಿದೆ.* ಕರ್ನಾಟಕದಲ್ಲಿ ಮಂತ್ರಿಗಳು ಮತ್ತು ವಿಧಾನಮಂಡಲ ಸದಸ್ಯರ ವೇತನ ಹಾಗೂ ಭತ್ಯೆಗಳನ್ನು ಹೆಚ್ಚಿಸಲು ತಿದ್ದುಪಡಿ ಮಸೂದೆಗಳ ಸಿದ್ಧತೆ ಪೂರ್ಣಗೊಂಡಿದ್ದು, ಈ ಅಧಿವೇಶನದಲ್ಲಿಯೇ ಮಂಡಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ.* ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಎರಡು ತಿದ್ದುಪಡಿಗಳಿಗೆ ಅನುಮೋದನೆ ನೀಡಿದ್ದಾರೆ. ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ಶಿಫಾರಸು ಇರುವುದರಿಂದ, ವಿಧಾನಮಂಡಲದಲ್ಲಿ ಮಂಡಿಸುವ ಮೊದಲು ರಾಜ್ಯಪಾಲರ ಒಪ್ಪಿಗೆ ಅಗತ್ಯ. ಒಪ್ಪಿಗೆಗಾಗಿ ರಾಜ್ಯಪಾಲರಿಗೆ ಕಡತ ಸಲ್ಲಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.* 2015ರ ಶಾಸಕರ ವೇತನ ಪರಿಷ್ಕರಣೆಯ ಬಳಿಕ, 2022ರಲ್ಲಿ ಮತ್ತೆ ಪರಿಷ್ಕರಣೆ ನಡೆದಿತ್ತು. ಸಚಿವ ಜೆ.ಸಿ. ಮಾಧುಸ್ವಾಮಿ 2023ರಿಂದ ಪ್ರತೀ 5 ವರ್ಷಕ್ಕೊಮ್ಮೆ ವೇತನ ಹೆಚ್ಚಿಸುವ ಪ್ರಸ್ತಾಪ ಮಾಡಿದ್ದರು. ಆದರೆ, ಎರಡು ವರ್ಷವಾಗುವ ಮುನ್ನವೇ ಶಾಸಕರು ಮತ್ತೊಬ್ಬ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದು, ಪ್ರಸಕ್ತ ಅಧಿವೇಶನದ ಬಿಎಸಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ.ವೇತನ ಇಮ್ಮಡಿ - ಮುಖ್ಯಮಂತ್ರಿ ವೇತನ;75 ಸಾವಿರದಿಂದ 1.50 ಲಕ್ಷ- ಸಚಿವರ ವೇತನ;60 ಸಾವಿರದಿಂದ 1.25 ಲಕ್ಷ- ಮುಖ್ಯಮಂತ್ರಿ, ಸಚಿವರಿಗೆ ಆತಿಥ್ಯ ಭತ್ಯೆ; 4.50 ಲಕ್ಷದಿಂದ 5 ಲಕ್ಷ- ಸಚಿವರಿಗೆ ಮನೆ ಬಾಡಿಗೆ ಭತ್ಯೆ; 1.20 ಲಕ್ಷದಿಂದ 2.50 ಲಕ್ಷ- ರಾಜ್ಯ ಸಚಿವರ ವೇತನ;50 ಸಾವಿರದಿಂದ 75 ಸಾವಿರ- ರಾಜ್ಯ ಸಚಿವರಿಗೆ ಮನೆ ಬಾಡಿಗೆ ಭತ್ಯೆ;1.20ಲಕ್ಷದಿಂದ 2ಲಕ್ಷ