* ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಅವರ ಅವಧಿ ಮುಕ್ತಾಯವಾಗಿದ್ದು, ಸದ್ಯದಲ್ಲೇ ಹೊಸ ಚುನಾವಣಾ ಆಯುಕ್ತರ ನೇಮಕವಾಗಲಿದೆ ಎಂದು ಮೂಲಗಳು ತಿಳಿಸಿವೆ. ಅವರು ಮಂಗಳವಾರ ಅಧಿಕಾರದಿಂದ ನಿವೃತ್ತಿಯಾಗಲಿದ್ದಾರೆ.* ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ಮತ್ತು ಬಹುಶಃ 2026 ರಲ್ಲಿ ಬಂಗಾಳ, ತಮಿಳುನಾಡಿನಲ್ಲಿ ಮತ್ತು ಅಸ್ಸಾಂ ಮತ್ತು ಕೇರಳದಲ್ಲಿಯೂ ಚುನಾವಣೆಗಳನ್ನು ನೋಡಿಕೊಳ್ಳುವ ಹೊಸ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಶೀಘ್ರದಲ್ಲೇ ನಡೆಯಲಿದೆ. ಕುಮಾರ್ ಅವರನ್ನು ಮೇ 2022 ರಲ್ಲಿ ಸಿಇಸಿ ಆಗಿ ನೇಮಿಸಲಾಯಿತು.* 2022 ರಲ್ಲಿ ರಾಷ್ಟ್ರಪತಿ ಚುನಾವಣೆಯನ್ನು ನಡೆಸಿದ್ದಾರೆ. 2023 ರಲ್ಲಿ ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಚುನಾವಣೆಗಳ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜೀವ್ ಕುಮಾರ್ ನಂತರ ಜ್ಞಾನೇಶ್ ಕುಮಾರ್ ಅತ್ಯಂತ ಹಿರಿಯ ಚುನಾವಣಾ ಆಯುಕ್ತರಾಗಿದ್ದಾರೆ.* ಇವರ ಅಧಿಕಾರಾವಧಿಯು ಜನವರಿ .26, 2029ರವರೆಗೆ ಇದೆ. ಸುಖಬೀರ್ ಸಿಂಗ್ ಸಂಧು ಇತರರು ಚುನಾವಣಾ ಆಯುಕ್ತರಾಗಿದ್ದು, ಇವರ ಹೆಸರು ಮುನ್ನಲೆಗೆ ಬಂದಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.