* ಪ್ರಧಾನಿ ನರೇಂದ್ರ ಮೋದಿ ಅವರು ಏಳು ವರ್ಷಗಳ ಬಳಿಕ ಚೀನಾಗೆ ಭೇಟಿ ನೀಡಿದ್ದಾರೆ. ಜಪಾನ್ ಪ್ರವಾಸದ ನಂತರ ಅವರು ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲು ಟಿಯಾನ್ಜಿನ್ಗೆ ಆಗಮಿಸಿದರು.* ಗಡಿವಿವಾದ ಸೇರಿದಂತೆ ದ್ವಿಪಕ್ಷೀಯ ವಿಷಯಗಳ ಬಗ್ಗೆ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಮಾತುಕತೆ ನಡೆಸಿದರು. ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಲು ಇಬ್ಬರೂ ಬದ್ಧತೆ ವ್ಯಕ್ತಪಡಿಸಿದರು.* ಅಭಿವೃದ್ಧಿ ವಿಚಾರದಲ್ಲಿ ಭಾರತ–ಚೀನಾ ಪಾಲುದಾರರೇ ಹೊರತು ಪ್ರತಿಸ್ಪರ್ಧಿಗಳಲ್ಲ ಎಂಬ ಅಭಿಪ್ರಾಯ ಹಂಚಿಕೊಂಡರು.* ಅಮೆರಿಕ ಸುಂಕ ಹೇರಿಕೆಯ ಹಿನ್ನೆಲೆಯಲ್ಲಿ ಜಾಗತಿಕ ಅರ್ಥವ್ಯವಸ್ಥೆಗೆ ಸ್ಥಿರತೆ ತರಲು ಭಾರತ–ಚೀನಾ ಸಹಕಾರ ಅಗತ್ಯವೆಂದು ಒಪ್ಪಿಕೊಂಡರು. ಪರಸ್ಪರ ದೇಶಗಳ ಯಶಸ್ಸಿನಲ್ಲಿ ಪಾಲುದಾರರಾಗಬೇಕೆಂಬ ನಿಲುವನ್ನು ಇಬ್ಬರೂ ನಾಯಕರು ವ್ಯಕ್ತಪಡಿಸಿದರು.* ಮೋದಿ ಅವರು ಷಿ ಜಿನ್ಪಿಂಗ್ ಅವರನ್ನು ಮುಂದಿನ ಬ್ರಿಕ್ಸ್ ಶೃಂಗಸಭೆಗೆ ಆಹ್ವಾನಿಸಿದರು. ಇದಕ್ಕೆ ಪ್ರತಿಯಾಗಿ ಷಿ ಅವರು ಭಾರತದ ಅಧ್ಯಕ್ಷತೆಯನ್ನು ಬೆಂಬಲಿಸಿದರು.* ‘ಡ್ರ್ಯಾಗನ್ ಮತ್ತು ಆನೆ ಜತೆಯಾಗುವುದು ಉತ್ತಮ ಬೆಳವಣಿಗೆ’ ಎಂದು ಜಿನ್ಪಿಂಗ್ ಅಭಿಪ್ರಾಯಪಟ್ಟರು. ಪರಸ್ಪರ ನಂಬಿಕೆ ಮತ್ತು ಗೌರವದ ಆಧಾರದ ಮೇಲೆ ಬಾಂಧವ್ಯ ಬಲಪಡಿಸಲು ಇಬ್ಬರೂ ನಾಯಕರು ಒಟ್ಟಿಗೆ ಕೆಲಸ ಮಾಡುವುದಾಗಿ ಒಪ್ಪಿಕೊಂಡರು.