* ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು(ಆಗಸ್ಟ್ 28) ಸಂಜೆ ಜಪಾನ್ಗೆ ತೆರಳಿ, 15ನೇ ಭಾರತ–ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.* ಇದು ಮೋದಿಯವರ ಎಂಟನೇ ಜಪಾನ್ ಭೇಟಿ ಆಗಿದ್ದು, ಜಪಾನ್ ಪ್ರಧಾನಿ ಶಿಗೆರು ಇಶಿಬಾ ಅವರೊಂದಿಗೆ ನಡೆಯುವ ಮೊದಲ ಶೃಂಗಸಭೆಯಾಗಿದೆ.* ಭೇಟಿಯಲ್ಲಿ ರಕ್ಷಣಾ, ವಾಣಿಜ್ಯ, ತಂತ್ರಜ್ಞಾನ, ಜನ–ಜನ ಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳ ಸಹಕಾರವನ್ನು ಪರಿಶೀಲಿಸಲಾಗುವುದು. ಜೊತೆಗೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಮೇಲೂ ಚರ್ಚೆ ನಡೆಯಲಿದೆ.* ನಂತರ, ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರವರೆಗೆ ಚೀನಾದ ಟಿಯಾಂಜಿನ್ನಲ್ಲಿ ನಡೆಯುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ.* ಈ ಸಂದರ್ಭದಲ್ಲಿ ಹಲವು ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಭಾರತವು 2017ರಿಂದ SCO ಸದಸ್ಯ ರಾಷ್ಟ್ರವಾಗಿದ್ದು, 2022–23ರಲ್ಲಿ ಸಂಸ್ಥೆಯ ಅಧ್ಯಕ್ಷತೆಯನ್ನು ವಹಿಸಿತ್ತು.