* 2025-26ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ (Q1 FY26) ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ಶೇಕಡಾ 47 ರಷ್ಟು ಬಲವಾದ ಬೆಳವಣಿಗೆಯನ್ನು ಕಂಡಿದ್ದು, 1.06 ಲಕ್ಷ ಕೋಟಿ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ. * ಅಮೆರಿಕ, ಯುಎಇ ಮತ್ತು ಚೀನಾ ಭಾರತೀಯ ಎಲೆಕ್ಟ್ರಾನಿಕ್ಸ್ಗಾಗಿ ಪ್ರಮುಖ ರಫ್ತು ತಾಣಗಳಾಗಿವೆ. ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ಅಮೆರಿಕದ ಪಾಲು ಶೇ.60.17 ಆಗಿದ್ದು, ಯುಎಇ (ಶೇ.8.09) ಮತ್ತು ಚೀನಾ (ಶೇ.3.88) ನಂತರ ಬರುತ್ತವೆ. ನೆದರ್ಲ್ಯಾಂಡ್ಸ್ (ಶೇ.2.68) ಮತ್ತು ಜರ್ಮನಿ (ಶೇ.2.09) ಇತರ ಪ್ರಮುಖ ಮಾರುಕಟ್ಟೆಗಳಾಗಿವೆ.* ಇದು ಭಾರತವು ವಿಶ್ವದ ಎಲೆಕ್ಟ್ರಾನಿಕ್ ಪೂರೈಕೆ ಸರಪಳಿಯಲ್ಲಿ ಬೆಳೆದಿರುವುದನ್ನು ತೋರಿಸುತ್ತದೆ.* ಸಿದ್ಧ ಉಡುಪುಗಳ (RMG) ರಫ್ತು: RMG ರಫ್ತಿನಲ್ಲಿ ಅಮೆರಿಕ ಶೇ.34.11 ರೊಂದಿಗೆ ಮುಂಚೂಣಿಯಲ್ಲಿದೆ, ನಂತರ ಯುಕೆ (ಶೇ.8.81), ಯುಎಇ (ಶೇ.7.85), ಜರ್ಮನಿ (ಶೇ.5.51) ಮತ್ತು ಸ್ಪೇನ್ (ಶೇ.5.29) ರಿವೆ.- ಏಪ್ರಿಲ್-ಜೂನ್ ಅವಧಿಯಲ್ಲಿ RMG ರಫ್ತು $4.19 ಬಿಲಿಯನ್ ಆಗಿದ್ದು, ಕಳೆದ ವರ್ಷ ಇದೇ ಅವಧಿಯ $3.85 ಬಿಲಿಯನ್ನಿಂದ ಏರಿಕೆಯಾಗಿದೆ. 2024-25ರಲ್ಲಿ RMG ರಫ್ತು ಶೇ.10.03 ಹೆಚ್ಚಳಗೊಂಡು $15.99 ಬಿಲಿಯನ್ ತಲುಪಿದೆ.* ಸಮುದ್ರಾಹಾರ ರಫ್ತು: 2024-25ರ ಏಪ್ರಿಲ್-ಜೂನ್ ಅವಧಿಯಲ್ಲಿ ಸಮುದ್ರಾಹಾರ ರಫ್ತು ಶೇ.19.45 ಏರಿಕೆಯಾಗಿದ್ದು, $1.95 ಬಿಲಿಯನ್ ಆಗಿದೆ. ವಾರ್ಷಿಕವಾಗಿ $7.41 ಬಿಲಿಯನ್ ದಾಖಲಿಸಿ ಶೇ.4.5 ರಷ್ಟು ಬೆಳವಣಿಗೆ ಕಂಡಿದೆ. ಅಮೆರಿಕ (ಶೇ.37.63), ಚೀನಾ (ಶೇ.17.26), ವಿಯೆಟ್ನಾಂ, ಜಪಾನ್ ಮತ್ತು ಬೆಲ್ಜಿಯಂ ಪ್ರಮುಖ ಮಾರುಕಟ್ಟೆಗಳಾಗಿವೆ. ಉತ್ತಮ ಲಾಜಿಸ್ಟಿಕ್ಸ್ ಮತ್ತು ಗುಣಮಟ್ಟದ ಮಾನದಂಡಗಳ ಪಾಲನೆಯೇ ಈ ಬೆಳವಣಿಗೆಗೆ ಕಾರಣವಾಗಿದೆ.* ಭಾರತವು ವಿಶ್ವದ ಪ್ರಮುಖ ಉತ್ಪಾದನಾ ಹಾಗೂ ರಫ್ತು ಕೇಂದ್ರವಾಗಿ ಸ್ಥಿರಗತಿಗೊಳ್ಳುತ್ತಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.