* ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತವು ಜಾರವ ಸಮುದಾಯದ 19 ಮಂದಿ ಸದಸ್ಯರಿಗೆ ಮತದಾರರ ಗುರುತಿನ ಪತ್ರವನ್ನು ವಿತರಿಸಿದೆ.* ಜಾರವ ಸಮುದಾಯಕ್ಕೂ ತಮ್ಮ ಹಕ್ಕು ಚಲಾಯಿಸುವ ಅವಕಾಶ ಸಿಗುವಂತೆ ದ್ವೀಪಗಳ ಆಡಳಿತವು ಹೆಜ್ಜೆ ಇಟ್ಟಿದ್ದು ಐತಿಹಾಸಿಕ ನಡೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಚಂದ್ರಭೂಷಣ್ ಕುಮಾರ್ ಹೇಳಿದ್ದಾರೆ.* ಹೊರಜಗತ್ತಿನಿಂದ ಪ್ರತ್ಯೇಕವಾಗಿಯೇ ಉಳಿದಿದ್ದ ಹಾಗು ಆಕ್ರಮಣಕಾರಿ ಪ್ರವೃತ್ತಿಯ ಈ ಬುಡಕಟ್ಟು ಜನರಿಗೆ ತಮ್ಮ ಹಕ್ಕು ಚಲಾಯಿಸುವ ಅವಕಾಶ ಸಿಕ್ಕಿದೆ.* ದಕ್ಷಿಣ ಅಂಡಮಾನ್ ಜಿಲ್ಲೆಯ ಜಿರ್ ಕಾಟಾಂಗ್ ವಸತಿ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಡಮಾನ್ ಆದಿಮ್ ಜನಜಾತಿ ವಿಕಾಸ ಸಮಿತಿಯು ಜರಾವಾ ಸಮುದಾಯಕ್ಕೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಅರಿವನ್ನು ನೀಡುವ ಮೂಲಕ ನಿರ್ಣಾಯಕ ಪಾತ್ರವನ್ನು ವಹಿಸಿದೆ.* ಜಾರವ ಸಮುದಾಯದ ವಿಶಿಷ್ಟ ಗುರುತು ಮತ್ತು ಖಾಸಗಿತನ ರಕ್ಷಣೆ ಮಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮತದಾನದ ಹಕ್ಕು ನೀಡುವ ಮೂಲಕ ಸಮಾನತೆ ಕುರಿತು ದೇಶ ಹೊಂದಿರುವ ತನ್ನ ಬದ್ಧತೆಯನ್ನು ಪ್ರತಿಪಾದಿಸಲಾಗಿದೆ ಎಂದು ದಕ್ಷಿಣ ಅಂಡಮಾನ್ ಜಿಲ್ಲೆಯ ಚುನಾವಣಾ ಅಧಿಕಾರಿ ಅರ್ಜುನ್ ಶರ್ಮಾ ಹೇಳಿದ್ದಾರೆ.* ಈ ಸಮುದಾಯದವರ ನೋಂದಣಿ ಪ್ರಕ್ರಿಯೆ ವೇಳೆ, ಅವರ ದೈನಂದಿನ ಚಟುವಟಿಕೆಗಳಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಅಲ್ಲಿನ ಸರಕಾರ ತಿಳಿಸಿದೆ.