* ಮನೋಜ್ ಜೈನ್ ಅವರನ್ನು ಕಂಪನಿಯ ಹೊಸ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಈ ವರ್ಷದ ಜೂನ್ 20 ರಿಂದ ಜಾರಿಗೆ ಬರುವಂತೆ ಬಿಇಎಲ್ ನ ನೂತನ ಎಂಡಿ ಮತ್ತು ಅಧ್ಯಕ್ಷರಾಗಿ ನೇಮಿಸಲಾಗಿದೆ.* ಭಾರತದ ಪ್ರಮುಖ ರಕ್ಷಣಾ ಎಲೆಕ್ಟ್ರಾನಿಕ್ಸ್ ಕಂಪನಿಯಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ತನ್ನ ಉನ್ನತ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. * ಆರ್ ಇಸಿ ಜೈಪುರಯಿಂದ ಚಿನ್ನದ ಪದಕದೊಂದಿಗೆ ಎಲೆಕ್ಟ್ರಾನಿಕ್ಸ್ ನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ನಂತರ 1991 ರ ಆಗಸ್ಟ್ ನಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಪ್ರೊಬೇಷನರಿ ಇಂಜಿನಿಯರ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದರು.* ಜೈನ್ ಅವರು 26 ಸೆಪ್ಟೆಂಬರ್ 2022 ರಿಂದ ನಿರ್ದೇಶಕರಾಗಿದ್ದರು (ಆರ್ & ಡಿ) ಮತ್ತು 1 ಆಗಸ್ಟ್ 2023 ರಿಂದ ನಿರ್ದೇಶಕರ (ಬೆಂಗಳೂರು ಕಾಂಪ್ಲೆಕ್ಸ್) ಹೆಚ್ಚುವರಿ ಪ್ರಭಾರವನ್ನು ಸಹ ನಿಯೋಜಿಸಲಾಯಿತು. * BEL ನ ಪ್ರಮುಖ ವ್ಯವಹಾರಗಳಲ್ಲಿ ಒಂದಾದ ರಾಡಾರ್ , ಬಲ್ಕ್ ಸೆಕ್ಯುರಿಟಿ ಸೆಲ್ಯೂಷನ್, FPGA ಬಳಸಿಕೊಂಡು VeXT, ಸ್ಕ್ಯಾನ್ ಪರಿವರ್ತಕ ಮತ್ತು ಡಿಸ್ಪ್ಲೇ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು.* ಮನೋಜ್ ಜೈನ್ ಅವರು ವಿವಿಧ R&D ಪ್ರಶಸ್ತಿಗಳು, Key Contributor Awards, ರಕ್ಷಾ ಮಂತ್ರಿ ಪ್ರಶಸ್ತಿ ಮತ್ತು SODET ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.