* ಕನ್ನಡ ಸಾಹಿತ್ಯ ಪರಿಷತ್ತಿನ ‘ಮನೋಹರಿ ಪಾರ್ಥಸಾರಥಿ ಮನುಶ್ರೀ ದತ್ತಿ ಪ್ರಶಸ್ತಿ’ಗೆ ಲೇಖಕಿ ಎಲ್. ಗಿರಿಜಾ ರಾಜ್ ಆಯ್ಕೆಯಾಗಿದ್ದಾರೆ.* ಈ ಪ್ರಶಸ್ತಿಯಲ್ಲಿ ₹10,000 ನಗದು ನೀಡಲಾಗುತ್ತದೆ. ಸಾಹಿತ್ಯ ಕ್ಷೇತ್ರದ ಸಾಧಕರನ್ನು ಗೌರವಿಸಲು ಅತ್ತಿಮಬ್ಬೆ ಪ್ರತಿಷ್ಠಾನ ಟ್ರಸ್ಟ್ ಈ ದತ್ತಿಯನ್ನು ಸ್ಥಾಪಿಸಿದೆ.* 2025ನೇ ಸಾಲಿನ ಪ್ರಶಸ್ತಿ ವಿಜೇತರಾದ ಗಿರಿಜಾ ರಾಜ್ ಸದ್ಯ ಬೆಂಗಳೂರಿನಲ್ಲಿ ನೆಲಸಿದ್ದಾರೆ. ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿರುವ ಅವರು ಇದುವರೆಗೂ 16 ಕೃತಿಗಳನ್ನು ಪ್ರಕಟಿಸಿದ್ದಾರೆ.* ಕವಯಿತ್ರಿ, ಪ್ರಬಂಧಗಾರ್ತಿ ಗಿರಿಜಾ ರಾಜ್. ಎಲ್ ಅವರು 1957 ಮಾರ್ಚ್ 06 ರಂದು ಚಿತ್ರದುರ್ಗದಲ್ಲಿ ಜನಿಸಿದರು. * ಕನ್ನಡದಲ್ಲಿ ಸ್ನಾತಕ್ಕೋತ್ತರ ಪಡೆದಿರುವ ಇವರು ಅಮೃತ ಚೇತನಾ, ಚಿನ್ಮಯಿ, ಪ್ರಿಯಬಾಂಧವಿ, ಪ್ರಣತಿ ಮುಂತಾದ ಕವನ ಸಂಕಲನಗಳನ್ನು ಹೊರತಂದಿದ್ದಾರೆ.* ಹಾಸ್ಯ ಚಂದನ ಇವರ ಹಾಸ್ಯ ಲೇಖನಗಳ ಸಂಗ್ರವಾಗಿದ್ದು ಉತ್ಥಾನ ವಾರ್ಷಿಕ ಕಥಾಸ್ಪರ್ಧೆಯಲ್ಲಿ ನಾಲ್ಕು ಬಾರಿ, ಲೇಖನ ಸ್ಪರ್ಧೆಗಳಲ್ಲಿ ಬಹುಮಾನಗಳಿಸಿದ್ದಾರೆ. ಇವರ ಹಲವಾರು ಲೇಖನಗಳು ಕನ್ನಡದ ಬಹುತೇಕ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.