* ಮಣಿಪುರದಲ್ಲಿ ಉಂಟಾದ ಜನಾಂಗೀಯ ಘರ್ಷಣೆಯ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವ ನಿರ್ಧಾರವು ಶುಕ್ರವಾರ(ಏಪ್ರಿಲ್ 04) ಲೋಕಸಭೆಯಲ್ಲಿ ಅನುಮೋದನೆಯಾಯಿತು.* ಗುರುವಾರ ಮಧ್ಯರಾತ್ರಿ 2 ಗಂಟೆಗೆ ಮಣಿಪುರದ ಕುರಿತು 41 ನಿಮಿಷಗಳ ಚರ್ಚೆ ನಡೆಯಿತು. ಮಧ್ಯರಾತ್ರಿಯಲ್ಲಿ ಈ ಬಗ್ಗೆ ಚರ್ಚೆ ಕೈಗೆತ್ತಿಕೊಂಡ ಬಗ್ಗೆ ಪ್ರತಿ ಪಕ್ಷಗಳು ವಿರೋಧ ವ್ಯಕ್ತಪಡಿಸಿದವು.* ಈ ನಿರ್ಧಾರಕ್ಕೆ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದರೂ, ಇಂದಿನ ಮಣಿಪುರದ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಅವರು ತೀವ್ರವಾಗಿ ಟೀಕಿಸಿದರು.* ರಾಷ್ಟ್ರಪತಿ ಆಳ್ವಿಕೆ ಸಂಬಂಧ ಚರ್ಚೆ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ಮಾತನಾಡುತ್ತಾ, ಮಣಿಪುರದ ಈಶಾನ್ಯ ಭಾಗದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.* ಕಳೆದ ನಾಲ್ಕು ತಿಂಗಳಿನಿಂದ ಮಣಿಪುರದಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲವೆಂದು ಹೇಳಿ, ಶಾಶ್ವತ ಶಾಂತಿಗಾಗಿ ಮೈತೇಯಿ ಮತ್ತು ಕುಕಿ ಸಮುದಾಯಗಳೊಂದಿಗೆ ಸರ್ಕಾರ ಸಂವಾದ ನಡೆಸುತ್ತಿದೆ ಎಂದು ಹೇಳಿದರು.