* ನಾಸಾ ಉಡಾಯಿಸಿದ ‘ಪರ್ಸೆವೆರನ್ಸ್’ ರೋವರ್ ಮಂಗಳ ಗ್ರಹದಲ್ಲಿ ಹಸಿರು ಧ್ರುವಪ್ರಭೆ (ಅರೋರಾ) ಪತ್ತೆ ಮಾಡಿದೆ. ಇದನ್ನು ಬರಿಗಣ್ಣಿಗೆ ನೋಡಬಹುದಾಗಿದೆ ಎಂಬುದು ಇದರ ವಿಶೇಷತೆಯಾಗಿದೆ.* ಭೂಮಿಯ ಹೊರತು ಸೌರಮಂಡಲದ ಬೇರೆ ಗ್ರಹದಲ್ಲಿ ಧ್ರುವಪ್ರಭೆ ಪತ್ತೆಯಾದ ಮೊದಲ ಘಟನೆ ಇದಾಗಿದೆ. ಮಂಗಳನಲ್ಲಿ ಉತ್ತರ ಹಾಗೂ ದಕ್ಷಿಣ ಧ್ರುವಪ್ರಭೆ ಪತ್ತೆಯಾಗಬಹುದು ಎಂಬುದನ್ನು ಈ ಅಧ್ಯಯನ ದೃಢಪಡಿಸಿದೆ.* ಬಾಹ್ಯಾಕಾಶ ವಾತಾವರಣ ಅಧ್ಯಯನಕ್ಕೆ ಇದು ದಾರಿ ಮಾಡಿಕೊಡಲಿದೆ ಎಂದು ಒಸ್ಲೊ ವಿಶ್ವವಿದ್ಯಾಲಯದ ವಿಜ್ಞಾನಿ ಎಲೀಸ್ ರೈಟ್ ನಟ್ಸೆನ್ ಹೇಳಿದ್ದಾರೆ. ಅವರ ವರದಿ ‘ಸೈನ್ಸ್ ಅಡ್ವಾನ್ಸಸ್’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.* ಮಂಗಳದ ದೂಳಿನ ಕಣಗಳಿಂದ ಧ್ರುವಪ್ರಭೆಯ ಹೊಳಪು ಕಡಿಮೆಯಾಗಿತ್ತು. ದೂಳು ಇಲ್ಲದ ವೇಳೆ ಉತ್ತಮ ವಾತಾವರಣದಲ್ಲಿ ಗಗನಯಾತ್ರಿಗಳು ಈ ದೃಶ್ಯವನ್ನು ಸ್ಪಷ್ಟವಾಗಿ ಕಣ್ತುಂಬಿಕೊಳ್ಳಬಹುದು.* ‘ಪರ್ಸೆವೆರನ್ಸ್’ ರೋವರ್ನ್ನು 2020ರಲ್ಲಿ ಉಡಾಯಿಸಲಾಗಿದ್ದು, 2021ರಿಂದ ಮಂಗಳದ ಜೆಜೆರೊ ಕುಳಿಯಲ್ಲಿ ಅಧ್ಯಯನ ನಡೆಸುತ್ತಿದೆ.* ಈ ಪ್ರದೇಶವು ಹಿಂದೆ ಸರೋವರವಾಗಿದ್ದು, ಪ್ರಾಚೀನ ಸೂಕ್ಷ್ಮಾಣುಜೀವಿಗಳ ಪುರಾವೆಗಳಿಗಾಗಿ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.