* ಕಿದಂಬಿ ಶ್ರೀಕಾಂತ್ ಅವರ ಪ್ರಶಸ್ತಿ ನಿರೀಕ್ಷೆ ಈ ಭಾನುವಾರವೂ(ಮೇ 25) ಸಾಕಾರವಾಗಲಿಲ್ಲ. ಮಲೇಷ್ಯಾ ಮಾಸ್ಟರ್ಸ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅವರು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಯಾಗಬೇಕಾಯಿತು.* ಇಲ್ಲಿನ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ 32 ವರ್ಷದ ಶ್ರೀಕಾಂತ್ ಚೀನಾದ ಎರಡನೇ ಶ್ರೇಯಾಂಕಿತ ಲಿ ಶಿ ಫೆಂಗ್ ಎದುರು 11–21, 9–21ರಿಂದ ಸೋಲನುಭವಿಸಿದರು. ಕೇವಲ 36 ನಿಮಿಷಗಳ ಪಂದ್ಯದಲ್ಲಿ ಚೀನಾದ ಆಟಗಾರ ಪ್ರಾಬಲ್ಯ ಮೆರೆದರು.* ಗಾಯದ ಕಾರಣದಿಂದ ಶ್ರೀಕಾಂತ್ ಪ್ರಮುಖ ಟೂರ್ನಿಗಳಿಗೆ ಹೊರಗುಳಿದಿದ್ದರು. ಚೇತರಿಸಿಕೊಂಡ ಬಳಿಕ ಮಲೇಷ್ಯಾ ಮಾಸ್ಟರ್ಸ್ BWF 500 ಟೂರ್ನಿಯಲ್ಲಿ ಅವರು ಮತ್ತೆ ಕಣಕ್ಕಿಳಿದರು.* ಟೂರ್ನಿಯ ಪ್ರವಾಸದಲ್ಲಿ ಶ್ರೀಕಾಂತ್ ಶ್ರೇಷ್ಠ ಪ್ರದರ್ಶನ ನೀಡುತ್ತಾ ಫೈನಲ್ಗೆ ದಾಪುಗಾಲಿಟ್ಟಿದ್ದರು.* ಪಂದ್ಯದ ಆರಂಭದಲ್ಲಿ ಅವರು ಕೆಲ ಲೋಪಗಳನ್ನು ಎಸಗಿದ ಪರಿಣಾಮ, ಲಿ ಶಿ 6–3 ಅಂಕಗಳ ಮುನ್ನಡೆ ಪಡೆದುಕೊಂಡರು. ನಂತರ ನೇರ ಸ್ಮ್ಯಾಶ್ಗಳಿಂದ ಲೀ ಇನ್ನೂ 2 ಅಂಕಗಳನ್ನು ಸೇರಿಸಿಕೊಂಡರು.* ಇದಕ್ಕೆ ಪ್ರತಿಕ್ರಿಯೆಯಾಗಿ ಶ್ರೀಕಾಂತ್ 402 ಕಿ.ಮೀ ವೇಗದ ಶಾಟ್ ಪ್ರಯೋಗಿಸಿದರೂ, ಚೀನೀ ಆಟಗಾರ ಗೇಮ್ ಗೆದ್ದು ಬೀಗಿದರು.