* ಈ ವರ್ಷದಲ್ಲಿ ಹವಾಮಾನ ಈ ಬದಲಾವಣೆ, ಆರ್ಥಿಕ ಅಸ್ಥಿರತೆ ಮತ್ತು ಸಂಘರ್ಷಗಳು ಮಕ್ಕಳ ಜೀವನ ಮತ್ತು ಭವಿಷ್ಯದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿವೆ ಎಂದು ಯುನಿಸೆಫ್ (ವಿಶ್ವಸಂಸ್ಥೆಯ ಮಕ್ಕಳ ನಿಧಿ) ವರದಿ ಮಾಡಿದೆ. * ಯುನಿಸೆಫ್ ತನ್ನ ವರದಿಯಲ್ಲಿ ಜಾಗತಿಕವಾಗಿ ಮಕ್ಕಳು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಉಲ್ಲೇಖಿಸಿ, ಮಕ್ಕಳ ರಕ್ಷಣೆಗೆ ಮತ್ತು ಬೆಂಬಲಕ್ಕೆ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳನ್ನು ಒತ್ತಿ ಹೇಳಿದೆ.* 473 ಮಿಲಿಯನ್ ಮಕ್ಕಳು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಇದು ಜಾಗತಿಕ ಮಕ್ಕಳ ಜನಸಂಖ್ಯೆಯ ಶೇ.19 ಅನ್ನು ತಲುಪಿದೆ.* ಸಶಸ್ತ್ರ ಸಂಘರ್ಷಗಳು ಮಕ್ಕಳ ಜೀವನದ ಮೇಲೆ ಪರಿಣಾಮವನ್ನುಂಟುಮಾಡುತ್ತವೆ. ಯುದ್ಧದಂತಹ ಘಟನೆಗಳು, ವಾಸಿಸುವ ಪ್ರದೇಶಗಳ ಸ್ಥಳಾಂತರ, ಹಸಿವು ಮತ್ತು ಮಾನಸಿಕ ಆಘಾತಕ್ಕೆ ಕಾರಣವಾಗುತ್ತವೆ ಎಂದು ಯುನಿಸೆಫ್ ಕಳವಳ ವ್ಯಕ್ತಪಡಿಸಿದೆ.* ಸುಮಾರು 400 ಮಿಲಿಯನ್ ಮಕ್ಕಳು ಸಾಲದ ಹೊರೆ ಹೊಂದಿರುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹೆಚ್ಚಿದ ಸಾಲದಿಂದ ಸರಕಾರಗಳು ಅಗತ್ಯ ಸೇವೆಗಳಿಗೆ ಹಣಕಾಸು ಒದಗಿಸಲು ತೊಂದರೆ ಅನುಭವಿಸುತ್ತಿವೆ.* ಕೆಲವು ಆಫ್ರಿಕನ್ ರಾಷ್ಟ್ರಗಳಲ್ಲಿ, ಶಿಕ್ಷಣ, ಆರೋಗ್ಯ, ಸಾಮಾಜಿಕ ರಕ್ಷಣೆಗಿಂತಲೂ ಸಾಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರಿಂದ ಮಕ್ಕಳ ಆರೋಗ್ಯಕರ ಬೆಳವಣಿಗೆಯ ಮೇಲೆ ಹಾನಿಕಾರಕ ಪರಿಣಾಮ ಉಂಟಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.