* ದೆಹಲಿ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಥುನ್ ಮನ್ಹಾಸ್ ಅವರನ್ನು ಬಿಸಿಸಿಐ 37ನೇ ಅಧ್ಯಕ್ಷರನ್ನಾಗಿ ಭಾನುವಾರ ನಡೆದ 94ನೇ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.* ರೋಜರ್ ಬಿನ್ನಿ ವಯೋಮಿತಿಯಿಂದ ಹುದ್ದೆ ತೊರೆದ ಹಿನ್ನೆಲೆಯಲ್ಲಿ 45 ವರ್ಷದ ಮಿಥುನ್ ಅಧಿಕಾರಕ್ಕೆ ಬಂದಿದ್ದಾರೆ.* 1997ರಿಂದ 2017ರ ನಡುವೆ ಮಿಥುನ್ 157 ಪ್ರಥಮ ದರ್ಜೆ ಪಂದ್ಯಗಳಲ್ಲಿ 9714 ರನ್ಗಳನ್ನು ಗಳಿಸಿದ್ದಾರೆ.* ಜಮ್ಮು–ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಆಡಳಿತ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದ ಅವರು, ಕ್ರಿಕೆಟಿಗ ಹಾಗೂ ಆಡಳಿತಗಾರರ ಅನುಭವದಿಂದಲೇ ಈ ಹುದ್ದೆಗೆ ಆಯ್ಕೆಯಾಗಿದ್ದಾರೆ.ಇತರೆ ನೇಮಕಾತಿಗಳು- ರಾಜೀವ್ ಶುಕ್ಲಾ ಉಪಾಧ್ಯಕ್ಷರಾಗಿ ಮುಂದುವರಿದರು.- ರಘುರಾಮ್ ಭಟ್ (ಕೆಎಸ್ಸಿಎ ಅಧ್ಯಕ್ಷ) ಅವರನ್ನು ಬಿಸಿಸಿಐ ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು.- ಪ್ರಭತೇಜ್ ಭಾಟಿಯಾ ಜಂಟಿ ಕಾರ್ಯದರ್ಶಿ, ಜಯದೇವ್ ಶಾ ಮತ್ತು ರೋಹನ್ ಗೌನ್ಸ್ ದೇಸಾಯಿ ಅಪೆಕ್ಸ್ ಕೌನ್ಸಿಲ್ ಸದಸ್ಯರಾಗಿ ನೇಮಕಗೊಂಡರು.- ಐಪಿಎಲ್ ಆಡಳಿತ ಸಮಿತಿಗೆ ಎಂ. ಖೈರುಲ್ ಜಮಾಲ್ ಮಜುಂದಾರ್ ಸೇರಿದರು.* ರಾಷ್ಟ್ರೀಯ ಹಿರಿಯ ಆಯ್ಕೆ ಸಮಿತಿಗೆ ಆರ್.ಪಿ. ಸಿಂಗ್ ಮತ್ತು ಪ್ರಗ್ಯಾನ್ ಓಜಾ ಸೇರಿದರು.