* 2025ರ ವಿಶ್ವ ಸುಂದರಿ ಕಿರೀಟವನ್ನು ಥಾಯ್ಲೆಂಡ್ನ ಒಪಾಲ್ ಸುಚಾತಾ ಚೌಂಗಶ್ರೀ ಅವರು ಮುಡಿಗೇರಿಸಿಕೊಂಡಿದ್ದಾರೆ.* ಇಥಿಯೋಪಿಯಾದ ಹಾಸೆಟ್ ಡೆರೆಜ್ ಅದ್ಮಾಸ್ಸು ಮೊದಲ ರನ್ನರ್ಅಪ್ ಆಗಿದರೆ, ಪೋಲ್ಯಾಂಡ್ನ ಸ್ಪರ್ಧಿ 2ನೇ ರನ್ನರ್ಅಪ್ ಹಾಗೂ ಕೆರಿಬಿಯನ್ ದ್ವೀಪದ ಸ್ಪರ್ಧಿ 3ನೇ ರನ್ನರ್ಅಪ್ ಆಗಿದ್ದಾರೆ.* ವಿಶ್ವ ಸುಂದರಿ ಸ್ಪರ್ಧೆಯ 72ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆ ಶನಿವಾರ(ಮೇ 31) ಸಂಜೆ ಹೈದರಾಬಾದ್ನ ಹೈಟೆಕ್ ಎಕ್ಸಿಬಿಷನ್ ಸೆಂಟರ್ನಲ್ಲಿ ಜರುಗಿತು. ವಿಜೇತ ಸುಚಾತಾ ಅವರಿಗೆ ಸುಮಾರು 8 ಕೋಟಿ ರೂಪಾಯಿ ಮೌಲ್ಯದ ವಜ್ರದ ಕಿರೀಟವನ್ನು ಧರಿಸಲಾಯಿತು.* ಭಾರತವನ್ನು ಪ್ರತಿನಿಧಿಸಿದ ನಂದಿನಿ ಗುಪ್ತಾ ಅವರು ಅಗ್ರ ಎಂಟು ಸ್ಥಾನಗಳಲ್ಲಿ ಸ್ಥಾನ ಪಡೆಯುವ ಮೊದಲು ಸ್ಪರ್ಧೆಯಿಂದ ಹೊರಬಿದ್ದರು.* ಈ ಬಾರಿ ಸ್ಪರ್ಧೆಯಲ್ಲಿ 108 ದೇಶಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಗಳು ಅಮೆರಿಕ-ಕೆರಿಬಿಯನ್, ಯುರೋಪ್, ಏಷ್ಯಾ ಮತ್ತು ಓಸಿನಿಯಾ ಎಂಬ ನಾಲ್ಕು ವಿಭಾಗಗಳಲ್ಲಿ ನಡೆದವು. * ಪ್ರತಿಯೊಂದು ವಿಭಾಗದಿಂದ 10 ಸ್ಪರ್ಧಿಗಳನ್ನು ಸೆಮಿಫೈನಲ್ಸ್ಗೆ ಆಯ್ಕೆ ಮಾಡಲಾಗಿದ್ದು, ಬಳಿಕ 16 ಜನ ಫೈನಲ್ ಪ್ರವೇಶಿಸಿದರು. ಫೈನಲ್ನಲ್ಲಿ ಟಾಪ್ 8 ಆಯ್ಕೆಯಾಗಿದ್ದು, ಅಲ್ಲಿ ಸುಚಾತಾ ಗೆಲುವು ಸಾಧಿಸಿದರು.* ಗ್ರ್ಯಾಂಡ್ ಫಿನಾಲೆಯನ್ನು 2016ರ ವಿಶ್ವ ಸುಂದರಿ ಸ್ಟೆಫನಿ ಡೆಲ್ ವ್ಯಾಲೆ ಮತ್ತು ಭಾರತೀಯ ನಿರೂಪಕ ಸಚಿನ್ ಕುಂಬಾರ್ ನಡೆಸಿಕೊಟ್ಟರು.* ಈ ಕಾರ್ಯಕ್ರಮದಲ್ಲಿ 2017ರ ವಿಶ್ವ ಸುಂದರಿ ಮಾನುಶಿ ಚಿಲ್ಲರ್ ಹಾಗೂ ನಟ ಸೋನು ಸೂದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.* ಮಹಿಳಾ ಸಬಲೀಕರಣ, ನಾಯಕತ್ವ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಉತ್ತೇಜಿಸುವ ಈ ಸ್ಪರ್ಧೆಗೆ ಭಾರತವು 1996 ಮತ್ತು 2024ರ ನಂತರ ಮೂರನೇ ಬಾರಿಗೆ ಆತಿಥ್ಯ ವಹಿಸಿತ್ತು.