* 2025ರ ಚಾಂಪಿಯನ್ಸ್ ಟ್ರೋಫಿ ಫೆಬ್ರುವರಿ 19ರಿಂದ ಮಾರ್ಚ್ 9ರವರೆಗೆ ನಿಗದಿಯಾಗಿದೆ. ಪ್ರತಿ ಬಾರಿಯಂತೆ ಈ ಸಲವೂ 8 ತಂಡಗಳು ಪೈಪೋಟಿ ನಡೆಸಲಿವೆ.* ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಸ್ಪರ್ಧೆಯಲ್ಲಿವೆ. ಮಿನಿ ವಿಶ್ವಕಪ್ನಲ್ಲಿ ಮಾಜಿ ವಿಶ್ವ ವಿಜೇತರಾಗಿದ್ದ ವೆಸ್ಟ್ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳು ಇಲ್ಲ.* ಹೈಬ್ರಿಡ್ ಮಾದರಿ. ಪಂದ್ಯಗಳು ಪಾಕಿಸ್ತಾನದ ಲಾಹೋರ್, ಕರಾಚಿ ಹಾಗೂ ರಾವಲ್ಪಿಂಡಿಯ ಜೊತೆಗೆ ದುಬೈನಲ್ಲಿ ನಡೆಯಲಿವೆ.* ಭಾರತದ ನಿರಾಕರಣೆಯಿಂದ ಟೂರ್ನಿ ಹೈಬ್ರಿಡ್ ಮಾದರಿಗೆ ಜಾರಿತು. ಪಾಕಿಸ್ತಾನದಲ್ಲಿ ಆಡಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ ಕಾರಣ, ಬಿಸಿಸಿಐ ತಂಡ ಕಳುಹಿಸಲು ಮನ್ನಿಸದೆ, ಐಸಿಸಿಗೆ ಹೈಬ್ರಿಡ್ ಮಾದರಿಯ ಒತ್ತಡ ಹೇರಿತು. ಬಿಸಿಸಿಐನ ಬೇಡಿಕೆಗೆ ಐಸಿಸಿ ಒಪ್ಪಿಗೆ ನೀಡಿ ಭಾರತ ಮಾತ್ರ ದುಬೈನಲ್ಲಿ ಪಂದ್ಯ ಆಡಲು ನಿರ್ಧರಿಸಲಾಯಿತು. ಉಳಿದ ತಂಡಗಳು ಪಾಕಿಸ್ತಾನದಲ್ಲಿ ಪಂದ್ಯಗಳನ್ನಾಡಲಿವೆ.* 2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ನೀಡಲು ಪಿಸಿಬಿ ಲಾಹೋರ್, ರಾವಲ್ಪಿಂಡಿ, ಕರಾಚಿ ಕ್ರೀಡಾಂಗಣಗಳ ನವೀಕರಣಕ್ಕೆ 12.3 ಬಿಲಿಯನ್ ಪಾಕಿಸ್ತಾನಿ ರುಪಾಯಿ (₹383 ಕೋಟಿ) ವೆಚ್ಚ ಅಂದಾಜಿಸಿದ್ದರೂ, ಈಗಾಗಲೇ 18 ಬಿಲಿಯನ್ (₹561 ಕೋಟಿ) ದಾಟಿದೆ. ಭಾರತ ತಂಡ ಪಾಕಿಸ್ತಾನಕ್ಕೆ ಹೋಗದೆ ಬಿಸಿಸಿಐ ನಿರಾಕರಿಸಿದ ಕಾರಣ, ಪಿಸಿಬಿಗೆ ಆರ್ಥಿಕ ತೊಡಕು ಎದುರಾಗಿದೆ. ನವೀಕರಣ ಪೂರ್ಣಗೊಂಡಿದ್ದರೂ, ಐಸಿಸಿ ಸರ್ಟಿಫಿಕೇಟ್ ನೀಡಬೇಕಿದೆ.