* ಮಿಜೋರಾಂನ ರಾಜಧಾನಿ ಐಜ್ವಾಲ್ಗೆ ರೈಲು ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ ಇದೀಗ ಪೂರ್ಣಗೊಂಡಿದ್ದು, ಉದ್ಘಾಟನೆಗಾಗಿ ಕಾಯುತ್ತಿದೆ. ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಚಾಲನೆ ನೀಡಿದ್ದರು.* ಅಸ್ಸಾಂನ ಬೈರಾಬಿಯಿಂದ ಐಜ್ವಾಲ್ನ ಸೈರಾಂಗ್ವರೆಗೆ 51.38 ಕಿ.ಮೀ ಉದ್ದದ ಈ ಮಾರ್ಗದಲ್ಲಿ 48 ಸುರಂಗಗಳು, 55 ದೊಡ್ಡ ಸೇತುವೆಗಳು ಮತ್ತು 88 ಸಣ್ಣ ಸೇತುವೆಗಳಿವೆ.* 1.86 ಕಿ.ಮೀ ಉದ್ದದ ಸುರಂಗ ಮತ್ತು 114 ಮೀಟರ್ ಎತ್ತರದ ಸೇತುವೆ ಪ್ರಮುಖ ಆಕರ್ಷಣೆ. ಆರು ಸೇತುವೆಗಳು ಕುತಬ್ ಮೀನಾರ್ಗಿಂತ ಎತ್ತರವಾಗಿವೆ.* ₹8,071 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಮಾರ್ಗದಲ್ಲಿ ಬೈರಾಬಿ, ಹೋರ್ಟೋಕಿ, ಕವನ್ಪುವಿ, ಮುಆಲ್ಖಾಂಗ್ ಮತ್ತು ಸೈರಾಂಗ್ ನಿಲ್ದಾಣಗಳಿವೆ. ರೈಲುಗಳು ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸಲಿವೆ.* ಸುರಂಗಗಳಲ್ಲಿ ಬ್ಯಾಲೆಸ್ಟ್ಲೆಸ್ ಹಳಿ ಅಳವಡಿಸಿದ್ದು, ಪ್ರವೇಶ ಭಾಗಗಳಲ್ಲಿ ಮಿಜೋರಾಂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾಕೃತಿಗಳನ್ನು ಅಲಂಕರಿಸಲಾಗಿದೆ. ಇದರಲ್ಲಿ ಮಿಜೋರಾಂ ಜನರ ಉಡುಪು, ಹಬ್ಬ-ಸಂಪ್ರದಾಯ, ಹಳ್ಳಿ ಜೀವನ, ಸಸ್ಯ-ಪ್ರಾಣಿ ವೈವಿಧ್ಯವನ್ನು ಚಿತ್ರಿಸಲಾಗಿದೆ.* ಈ ಸಂಪರ್ಕದಿಂದ ಮಿಜೋರಾಂ ರಾಜ್ಯದ ಆರ್ಥಿಕತೆ ಹಾಗೂ ಸಮಾಜದಲ್ಲಿ ಮಹತ್ತರ ಬದಲಾವಣೆ ನಿರೀಕ್ಷಿಸಲಾಗಿದೆ.* ಅಸ್ಸಾಂ ರಾಜ್ಯದ ಮೇಲಿನ ಅವಲಂಬನೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.