* ಮಿಜೋರಾಂ ವಿಧಾನಸಭೆಯಲ್ಲಿ ಗುರುವಾರ(ಆಗಸ್ಟ್ 28) ‘ಭಿಕ್ಷಾಟನೆ ನಿಷೇಧ ಮಸೂದೆ–2025’ ಅಂಗೀಕರಿಸಲಾಯಿತು. ವಿರೋಧ ಪಕ್ಷಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದವು.* ಸಮಾಜ ಕಲ್ಯಾಣ ಸಚಿವೆ ಲಾಲ್ರಿನ್ಪುಯಿ ಅವರು ಮಸೂದೆ ಮಂಡಿಸಿ, ಭಿಕ್ಷಾಟನೆಯನ್ನು ನಿಷೇಧಿಸುವುದರ ಜೊತೆಗೆ, ಸುಸ್ಥಿರ ಜೀವನೋಪಾಯ ಕಲ್ಪಿಸುವುದು ಇದರ ಉದ್ದೇಶ ಎಂದು ತಿಳಿಸಿದರು.* ರಾಜ್ಯದಲ್ಲಿ ಭಿಕ್ಷಾಟನೆ ಹೆಚ್ಚುತ್ತಿರುವುದರಿಂದ ಕಳವಳವಿದ್ದರೂ, ಚರ್ಚ್ಗಳು, ಎನ್ಜಿಒಗಳು ಮತ್ತು ಸರ್ಕಾರದ ಕ್ರಮಗಳಿಂದ ಭಿಕ್ಷುಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.* ಹೊರರಾಜ್ಯಗಳಿಂದ ರೈಲುಗಳ ಮೂಲಕ ಭಿಕ್ಷುಕರು ಬರುತ್ತಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿ, ಮೊದಲು ಅವರನ್ನು ಶಿಬಿರಗಳಲ್ಲಿ ಇರಿಸಿ, ನಂತರ ಮನೆಗಳಿಗೆ ಅಥವಾ ರಾಜ್ಯಗಳಿಗೆ ಕಳುಹಿಸಲಾಗುವುದು ಎಂದು ಸಚಿವರು ವಿವರಿಸಿದರು.* ಎಂಎನ್ಎಫ್ ನಾಯಕರು ಈ ಮಸೂದೆಯನ್ನು ಕ್ರಿಶ್ಚಿಯನ್ ನಂಬಿಕೆಗೆ ಹಾನಿಕಾರಕವೆಂದು ಆರೋಪಿಸಿದರು. ಆದರೆ, ಮುಖ್ಯಮಂತ್ರಿ ಲಾಲ್ದುಹೋಮ ಅವರು ಭಿಕ್ಷುಕರ ಪುನರ್ವಸತಿ ಮತ್ತು ರಾಜ್ಯವನ್ನು ಭಿಕ್ಷಾಟನೆಯಿಂದ ಮುಕ್ತಗೊಳಿಸುವುದು ಮಸೂದೆಯ ಮುಖ್ಯ ಉದ್ದೇಶ ಎಂದು ಸ್ಪಷ್ಟಪಡಿಸಿದರು.