* 2022-23ರ ಆರ್ಥಿಕ ವರ್ಷದಲ್ಲಿ ಉತ್ತರ ಪ್ರದೇಶವು ₹37,263 ಕೋಟಿ ಮಿಗತೆ ಬಜೆಟ್ ದಾಖಲಿಸಿ ದೇಶದಲ್ಲೇ ಮೊದಲ ಸ್ಥಾನ ಗಳಿಸಿದೆ* ಕರ್ನಾಟಕವು ₹13,496 ಕೋಟಿ ಹೆಚ್ಚುವರಿ ಆದಾಯ ಪಡೆದು 5ನೇ ಸ್ಥಾನದಲ್ಲಿದೆ. ಇದು ಮಹಾಲೇಖಪಾಲರು (CAG) ಮೊದಲ ಬಾರಿಗೆ ಸಿದ್ಧಪಡಿಸಿದ ರಾಜ್ಯಗಳ ಆದಾಯ-ಖರ್ಚು ವರದಿಯಲ್ಲಿ ಉಲ್ಲೇಖವಾಗಿದೆ.* ಮಿಗತೆ ಬಜೆಟ್ ಹೊಂದಿದ ಟಾಪ್-5 ರಾಜ್ಯಗಳು: ಉತ್ತರ ಪ್ರದೇಶ, ಗುಜರಾತ್, ಒಡಿಶಾ, ಜಾರ್ಖಂಡ್ ಮತ್ತು ಕರ್ನಾಟಕ. ನಂತರ ಛತ್ತೀಸ್ಗಢ, ತೆಲಂಗಾಣ, ಉತ್ತರಾಖಂಡ, ಮಧ್ಯಪ್ರದೇಶ ಮತ್ತು ಗೋವಾ ಸೇರಿ ಒಟ್ಟು 16 ರಾಜ್ಯಗಳು ಮಿಗತೆ ಬಜೆಟ್ ಸಾಧನೆ ಮಾಡಿವೆ.* ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿದ 12 ರಾಜ್ಯಗಳು ಕೊರತೆ ಬಜೆಟ್ ದಾಖಲಿಸಿವೆ. ಅವುಗಳಲ್ಲಿ ಆಂಧ್ರಪ್ರದೇಶ (-₹43,488 ಕೋಟಿ), ತಮಿಳುನಾಡು, ರಾಜಸ್ಥಾನ, ಪ. ಬಂಗಾಳ, ಕೇರಳ ಮತ್ತು ಮಹಾರಾಷ್ಟ್ರ ಪ್ರಮುಖ.* ತೆರಿಗೆ ಮತ್ತು ತೆರಿಗೆಯೇತರ ಆದಾಯ ಸಂಗ್ರಹಣೆಯಲ್ಲಿ ಹರ್ಯಾಣ (80%) ನಂ.1 ಸ್ಥಾನದಲ್ಲಿದ್ದು, ಕರ್ನಾಟಕ (69%) 5ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಹರ್ಯಾಣ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕ ಟಾಪ್-5 ರಾಜ್ಯಗಳಾಗಿವೆ.