Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಮಹಿಳಾ ಉದ್ಯಮಿಗಳಿಗಾಗಿ ರಾಜ್ಯದ ಮೊದಲ ಅಧಿಕೃತ ಇ-ಕಾಮರ್ಸ್ ಪೋರ್ಟಲ್ ‘ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್’ ಬಿಡುಗಡೆ
Authored by:
Yallamma G
Date:
19 ಜನವರಿ 2026
➤ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯದ ಮಹಿಳಾ ಉದ್ಯಮಿಗಳ ಆರ್ಥಿಕ ಸ್ವಾತಂತ್ರ್ಯ ಮತ್ತು ಡಿಜಿಟಲ್ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ
‘ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್’ (Gruha Lakshmi Digital Marketing)
ಎಂಬ ವಿನೂತನ ಇ-ಕಾಮರ್ಸ್ ಪೋರ್ಟಲ್ ಅನ್ನು ಬಿಡುಗಡೆ ಮಾಡಿದೆ.
➤
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನೇತೃತ್ವ ಹಾಗೂ ಜಿ. ಪದ್ಮಾವತಿ ಅವರ ಅಧ್ಯಕ್ಷತೆಯಲ್ಲಿ, ರಾಜ್ಯದ ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
➤
ಪೋರ್ಟಲ್ನ ಪ್ರಮುಖ ಉದ್ದೇಶಗಳು:-
=>
ಆರ್ಥಿಕ ಸ್ವಾವಲಂಬನೆ:
ಮಹಿಳಾ ಉದ್ಯಮಿಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಗ್ರಾಹಕರನ್ನು ತಲುಪುವಂತೆ ಮಾಡುವುದು.
=>
ಡಿಜಿಟಲ್ ಒಳಗೊಳ್ಳುವಿಕೆ:
ತಾಂತ್ರಿಕವಾಗಿ ಹಿಂದುಳಿದಿರುವ ಗ್ರಾಮೀಣ ಮಹಿಳಾ ಕುಶಲಕರ್ಮಿಗಳಿಗೆ ಆಧುನಿಕ ಇ-ಕಾಮರ್ಸ್ ಜಗತ್ತಿನ ಪರಿಚಯ ಮಾಡಿಕೊಡುವುದು.
=>
ಜಾಗತಿಕ ಮಾನ್ಯತೆ:
ಕರ್ನಾಟಕದ ವಿಶಿಷ್ಟ ಕಲೆ, ಕರಕುಶಲ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡಿಂಗ್ ಒದಗಿಸುವುದು.
➤
ಪೋರ್ಟಲ್ನ ಪ್ರಮುಖ ವೈಶಿಷ್ಟ್ಯಗಳು:-
=>
ಜಾಗತಿಕ ವೇದಿಕೆ:
gruhalakshmidigital.org
ಪೋರ್ಟಲ್ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳಾ ಕುಶಲಕರ್ಮಿಗಳ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ಒದಗಿಸುವುದು.
=>
ವೈವಿಧ್ಯಮಯ ಉತ್ಪನ್ನಗಳು:
ಕರಕುಶಲ ವಸ್ತುಗಳು, ಕೈಮಗ್ಗ, ಆಹಾರ ಪದಾರ್ಥಗಳು ಸೇರಿದಂತೆ ವಿವಿಧ ಉತ್ಪನ್ನಗಳ ಪ್ರದರ್ಶನ.
=>
ದೃಢೀಕೃತ ಉದ್ಯಮಿಗಳು:
ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವ ಉದ್ಯಮಿಗಳನ್ನು ಸರ್ಕಾರವು ಪರಿಶೀಲಿಸಿ, ಅಧಿಕೃತತೆಗೆ ಆದ್ಯತೆ ನೀಡುತ್ತದೆ.
=>
ಗ್ರಾಹಕ ಸ್ನೇಹಿ ವಿನ್ಯಾಸ:
ಸುಲಭವಾಗಿ ಶಾಪಿಂಗ್ ಮಾಡಲು ಪೂರಕವಾದ ತಾಂತ್ರಿಕ ವ್ಯವಸ್ಥೆ.
➤ ನೋಂದಣಿ ಪ್ರಕ್ರಿಯೆ:-
ಅರ್ಹ ಮಹಿಳಾ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಈ ವೇದಿಕೆಯಲ್ಲಿ ನೋಂದಾಯಿಸಲು ಮೂರು ಮಾರ್ಗಗಳಿವೆ:
1.
ಆನ್ಲೈನ್:
ನೇರವಾಗಿ
gruhalakshmidigital.org
ವೆಬ್ಸೈಟ್ ಮೂಲಕ.
2.
ಜಿಲ್ಲಾ ಮಟ್ಟದಲ್ಲಿ:
ಆಯಾ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ.
3.
ಕೇಂದ್ರ ಕಚೇರಿ:
ಬೆಂಗಳೂರಿನ ಇಲಾಖಾ ಮುಖ್ಯ ಕಚೇರಿಗೆ ಭೇಟಿ ನೀಡುವ ಮೂಲಕ.
➤
ಈ ಉಪಕ್ರಮವು ಕರ್ನಾಟಕದ ಮಹಿಳೆಯರನ್ನು ಕೇವಲ ಉತ್ಪಾದಕರನ್ನಾಗಿ ಮಾತ್ರವಲ್ಲದೆ, ಯಶಸ್ವಿ ಡಿಜಿಟಲ್ ಉದ್ಯಮಿಗಳನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
Take Quiz
Loading...