* ಭಾರತೀಯ ಜೀವ ವಿಮಾ ನಿಗಮ (LIC) ಮಹಿಳೆಯರ ಸಬಲೀಕರಣವನ್ನು ಉದ್ದೇಶಿಸಿ "ಎಲ್ಐಸಿ ಭೀಮಾ ಸಖಿ" ಎಂಬ ವಿಶಿಷ್ಟ ಯೋಜನೆಯನ್ನು ಆರಂಭಿಸಿದೆ.* ಈ ಯೋಜನೆಯ ಮುಖ್ಯ ಉದ್ದೇಶ ಮಹಿಳೆಯರಿಗೆ ಸ್ಥಿರ ಆದಾಯದ ಜೊತೆಗೆ ವಿಮಾ ಜಾಗೃತಿ ಹಾಗೂ ವ್ಯಾಪ್ತಿಯಲ್ಲಿ ಸಕ್ರಿಯ ಪಾತ್ರವಹಿಸಲು ಅವಕಾಶ ಕಲ್ಪಿಸುವುದಾಗಿದೆ.* ಈ ಯೋಜನೆಯಡಿ ಮಹಿಳಾ ಏಜೆಂಟ್ಗಳು ಮೊದಲ ಮೂರು ವರ್ಷಗಳ ಕಾಲ ಕಾರ್ಯಕ್ಷಮತೆಯ ಆಧಾರದ ಮೇಲೆ ಮಾಸಿಕ ವೇತನ ಪಡೆಯಲು ಅರ್ಹರಾಗಿರುತ್ತಾರೆ.* ಮೊದಲ ವರ್ಷದಲ್ಲಿ ₹7,000 ನಿಗದಿತ ವೇತನ ಸಿಗುತ್ತದೆ. ಎರಡನೇ ವರ್ಷದಲ್ಲಿ, ಮೊದಲ ವರ್ಷದ ಪಾಲಿಸಿಗಳಲ್ಲಿ ಕನಿಷ್ಠ 65% ಇನ್ಫೋರ್ಸ್ ಆಗಿದ್ದರೆ ₹6,000 ಸಿಗುತ್ತದೆ. ಮೂರನೇ ವರ್ಷದಲ್ಲಿ, 75% ಪಾಲಿಸಿಗಳು ಇನ್ಫೋರ್ಸ್ ಆಗಿದ್ದರೆ ₹5,000 ವೇತನ ಸಿಗುತ್ತದೆ.* ಈ ಯೋಜನೆಗೆ ಈಗಾಗಲೇ LIC ಏಜೆಂಟ್ ಆಗಿರುವವರು, LIC ನೌಕರರು ಹಾಗೂ ಅವರ ಕುಟುಂಬ ಸದಸ್ಯರು, ನಿವೃತ್ತ ನೌಕರರು ಮತ್ತು ಹಿಂದಿನ ಏಜೆಂಟ್ಗಳು ಅರ್ಹರಲ್ಲ.* ಅರ್ಜಿ ಸಲ್ಲಿಸಲು ಕನಿಷ್ಠ 18 ಮತ್ತು ಗರಿಷ್ಠ 70 ವರ್ಷದ ವಯಸ್ಸಿರಬೇಕು. ಅರ್ಹತೆಗಾಗಿ ಕನಿಷ್ಠ 10ನೇ ತರಗತಿ ಪಾಸಾಗಿರಬೇಕು.* ಅರ್ಜೆ ಸಲ್ಲಿಸಲು ವಯಸ್ಸು, ವಿಳಾಸ ಮತ್ತು ವಿದ್ಯಾರ್ಹತೆಯ ಪ್ರೂಫುಗಳ ಸ್ವ-ಅಧಿಸೂಚಿತ ಪ್ರತಿಗಳು ಹಾಗೂ ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ ಅಗತ್ಯವಿರುತ್ತದೆ. ಆಯ್ಕೆಗೊಂಡ ಮಹಿಳೆಯರಿಗೆ LIC ತರಬೇತಿ, ಮಾರ್ಕೆಟಿಂಗ್ ಸಾಮಗ್ರಿಗಳು ಮತ್ತು ಪ್ರಚಾರ ಬೆಂಬಲವನ್ನು ನೀಡುತ್ತದೆ.