* ರೈಲ್ವೆ ರಕ್ಷಣಾ ಪಡೆ (RPF) ಮಹಿಳಾ ಸಿಬ್ಬಂದಿಗೆ ಚಿಲ್ಲಿ ಸ್ಪ್ರೇ ನೀಡಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಶುಕ್ರವಾರ(ಮಾರ್ಚ್ 07) ತಿಳಿಸಿದೆ.* ಮಾರಕವಲ್ಲದ ಆದರೆ ಪರಿಣಾಮಕಾರಿ ಈ ಉಪಕರಣ (ಚಿಲ್ಲಿ ಸ್ಪ್ರೇ) ಮಹಿಳಾ ಆರ್ಪಿಎಫ್ ಸಿಬ್ಬಂದಿಗೆ ಸವಾಲಿನ ಸಂದರ್ಭಗಳನ್ನು ತ್ವರಿತವಾಗಿ ಎದುರಿಸಲು ನೆರವಾಗುತ್ತದೆ.* ವಿಶೇಷವಾಗಿ ಒಂಟಿಯಾಗಿ ಅಥವಾ ಮಕ್ಕಳೊಂದಿಗೆ ಪ್ರಯಾಣಿಸುವ ಮಹಿಳಾ ಪ್ರಯಾಣಿಕರನ್ನು ರಕ್ಷಿಸುವಾಗ ಅವರ ಸುರಕ್ಷಿತ ರೈಲು ಪ್ರಯಾಣವನ್ನು ಖಚಿತಪಡಿಸಲು ಸಹಾಯ ಮಾಡುತ್ತದೆ ಎಂದು ರೈಲ್ವೆ ಇಲಾಖೆಯು ತಿಳಿಸಿದೆ.* ಮಹಿಳಾ ಆರ್ಪಿಎಫ್ ಸಿಬ್ಬಂದಿಗೆ ಚಿಲ್ಲಿ ಸ್ಪ್ರೇ ನೀಡುವುದರಿಂದ ಅವರ ಭದ್ರತೆ ಹೆಚ್ಚಲಾಗುತ್ತದೆ. ಇದು ಬೆದರಿಕೆ ತಡೆಹಾಕಲು, ಕಿರುಕುಳಕ್ಕೆ ಪ್ರತಿಕ್ರಿಯಿಸಲು ಮತ್ತು ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಸಹಾಯಕವಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.* ಮಹಿಳೆಯರ ಸಬಲೀಕರಣ ಮತ್ತು ಸುರಕ್ಷಿತ ಸಾರ್ವಜನಿಕ ಸ್ಥಳಗಳನ್ನು ಖಚಿತಪಡಿಸಿಕೊಳ್ಳುವ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಈ ಉಪಕ್ರಮ ಮಾದರಿ. ಮಹಿಳಾ ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕೆ ಭಾರತೀಯ ರೈಲ್ವೆ ನಿರಂತರವಾಗಿ ಹಲವಾರು ಕ್ರಮಗಳನ್ನು ಪರಿಚಯಿಸಿದೆ. ಎಂದು ಆರ್ಪಿಎಫ್ ನ ಮಹಾನಿರ್ದೇಶಕ ಮನೋಜ್ ಯಾದವ್ ತಿಳಿಸಿದ್ದಾರೆ.