* ಮಹಾರಾಷ್ಟ್ರ ಸರ್ಕಾರ ಖಾಸಗಿ ವಲಯದಲ್ಲಿ ಕೆಲಸದ ಸಮಯವನ್ನು ವಿಸ್ತರಿಸಲು ತೀರ್ಮಾನಿಸಿದೆ. ಸದ್ಯ ಇರುವ 9 ಗಂಟೆಯ ಕೆಲಸದ ಅವಧಿಯನ್ನು 10 ಗಂಟೆಗೆ ಹೆಚ್ಚಿಸಲು ಕಾರ್ಮಿಕ ಸಚಿವಾಲಯ ಕರಡು ತಿದ್ದುಪಡಿ ಸಿದ್ಧಪಡಿಸಿ ಕ್ಯಾಬಿನೆಟ್ಗೆ ಮಂಡಿಸಿದೆ.* 2017ರ "ಶಾಪ್ಸ್ ಆ್ಯಂಡ್ ಎಸ್ಟಾಬ್ಲಿಶ್ಮೆಂಟ್" ಕಾಯ್ದೆಯಡಿ ನಿಗದಿಯಾಗಿದ್ದ ಕೆಲಸದ ಅವಧಿಯಲ್ಲಿ ಐದು ಪ್ರಮುಖ ಬದಲಾವಣೆ ತರಲು ಮುಂದಾಗಿದೆ. ದಿನಕ್ಕೆ ಗರಿಷ್ಠ 10 ಗಂಟೆ ಕೆಲಸ ಮಾತ್ರ ಮಾಡಿಸಬಹುದಾಗಿದೆ, ಅದಕ್ಕಿಂತ ಹೆಚ್ಚು ದುಡಿಸಿಕೊಳ್ಳುವಂತಿಲ್ಲ.* ಸತತ ಕೆಲಸದ ಅವಧಿಯನ್ನು 5 ಗಂಟೆಯಿಂದ 6 ಗಂಟೆಗೆ ವಿಸ್ತರಿಸಲಾಗಿದ್ದು, ಬಳಿಕ ಕಡ್ಡಾಯವಾಗಿ 30 ನಿಮಿಷಗಳ ಬ್ರೇಕ್ ನೀಡಬೇಕು ಎಂದು ನಿಯಮ ಬದಲಾವಣೆಯ ಪ್ರಸ್ತಾಪವಿದೆ.* ಓವರ್ಟೈಮ್ ನಿಯಮದಲ್ಲೂ ಬದಲಾವಣೆ ತರಲಾಗಿದ್ದು, ಮೂರು ತಿಂಗಳಲ್ಲಿ ಅನುಮತಿಸಲಾದ 125 ಗಂಟೆಯನ್ನು 144 ಗಂಟೆಗೂ ಹೆಚ್ಚಿಸಲಾಗುತ್ತಿದೆ. ಪ್ರತಿ ದಿನ ಕೆಲಸ ಹಾಗೂ ಓವರ್ಟೈಮ್ ಸೇರಿ ಗರಿಷ್ಠ 12 ಗಂಟೆ ಮಾತ್ರ ಅನುಮತಿಯಾಗಲಿದೆ.