* ಭಾರತದ ಮೊದಲ ಜಲಜ(Underwater) ಸಂಗ್ರಹಾಲಯ ಮತ್ತು ಕೃತಕ ಕೋರೆಲ್ ರೀಫ್ ಯೋಜನೆಗೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ವೆಂಗುರ್ಲಾ ತಾಲ್ಲೂಕಿನಲ್ಲಿ ಚಾಲನೆ ನೀಡಲಾಗಿದೆ.* ನಿವೃತ್ತಿಗೊಂಡ ಭಾರತೀಯ ನೌಕಾಪಡೆಯ ಯುದ್ಧ ನೌಕೆ INS ಗುಲ್ದಾರ್ ಅನ್ನು ಈ ಉದ್ದೇಶಕ್ಕಾಗಿ ರೂಪಾಂತರಿಸಲಾಗುತ್ತಿದೆ.* ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಆನ್ಲೈನ್ ಮೂಲಕ ಉದ್ಘಾಟಿಸಿದರು.* ಇದು ಪರಿಸರ ಸಂರಕ್ಷಣಾ, ಪರಂಪರೆ ಸಂರಕ್ಷಣೆ ಹಾಗೂ ಸಾಹಸ ಪ್ರವಾಸೋದ್ಯಮವನ್ನು ಒಟ್ಟಿಗೆ ಹೊಂದಿರುವ ಬಹುಆಯಾಮದ ಯೋಜನೆಯಾಗಿದೆ.* INS ಗುಲ್ದಾರ್, 1,120 ಟನ್ ತೂಕ ಮತ್ತು 83.9 ಮೀ ಉದ್ದದ ನೌಕೆ, 2024ರ ಜನವರಿಯಲ್ಲಿ ನಿವೃತ್ತಿಗೊಳಿಸಲಾಯಿತು. ಅದನ್ನು ಭಾರತೀಯ ನೌಕಾಪಡೆಯು MTDC ಗೆ ಉಚಿತವಾಗಿ ಹಸ್ತಾಂತರಿಸಿದೆ. ನೌಕೆಯ ಸಾಗಣೆ ಹಾಗೂ ಸ್ಥಾಪನೆಯ ಖರ್ಚನ್ನು ನೌಕಾಪಡೆಯೇ ಹೊರೆದುಕೊಂಡಿದ್ದು, ರಾಜ್ಯದ ಹಣ ಉಳಿಸಲಾಯಿತು.* ಈ ಯೋಜನೆಗೆ ₹46.91 ಕೋಟಿ ಅನುದಾನವನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ 2024ರ ಡಿಸೆಂಬರ್ನಲ್ಲಿ ಮಂಜೂರಿಸಿದೆ. 2025ರ ಏಪ್ರಿಲ್ 16 ರಂದು ನೌಕೆಯನ್ನು ಸಮುದ್ರದಲ್ಲಿ ಮುಳುಗಿಸುವ ಕಾರ್ಯವನ್ನು ಮಜಗಾವ್ ಡಾಕ್ ಶಿಪ್ಬಿಲ್ಡರ್ಸ್ಗೆ ನೀಡಲಾಗಿದೆ.* ಮುಳುಗಿಸಿದ ನಂತರ, ಈ ನೌಕೆ ಕೋರೆಲ್ ಬೆಳವಣಿಗೆಗೆ ಸಹಕಾರಿಯಾಗಿ ಪರಿಸರ ಸ್ನೇಹಿ ಸಮುದ್ರ ಪರಿಸರವನ್ನು ರೂಪಿಸಲಿದೆ. ಸ್ಕೂಬಾ ಡೈವಿಂಗ್ ಮತ್ತು ಭವಿಷ್ಯದಲ್ಲಿ ಸಬ್ಮೆರಿನ್ ಪ್ರವಾಸಕ್ಕೂ ಇಲ್ಲಿ ಅವಕಾಶ ಸಿಗಲಿದೆ.* ಇದು ಭಾರತೀಯ ನೌಕಾ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಪ್ರಾಯೋಗಿಕ ಯೋಜನೆಯಾಗಿದ್ದು, ಜಾಗತಿಕ ಮಾದರಿಗಳ ಪ್ರೇರಣೆಯಿಂದ ರೂಪುಗೊಂಡಿದೆ. ಯೋಜನೆಯು ಸಿಂಧುದುರ್ಗವನ್ನು ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಗಮನಾರ್ಹ ಸ್ಥಾನಕ್ಕೆ ತರುವ ನಿರೀಕ್ಷೆಯಿದೆ.