* ಮಹಾರಾಷ್ಟ್ರ 15ನೇ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಬಿಜೆಪಿಯ ರಾಹುಲ್ ನಾರ್ವೇಕರ್ ಅವರು ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಆಯ್ಕೆಯನ್ನು ಡಿಸೆಂಬರ್ 09 ರಂದು (ಸೋಮವಾರ) ಸದನದಲ್ಲಿ ಔಪಚಾರಿಕವಾಗಿ ಘೋಷಿಸಲಾಯಿತು.* ಹಂಗಾಮಿ ಸ್ಪೀಕರ್ ಕಾಳಿದಾಸ್ ಕೊಲಂಬ್ಕರ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ರಾಹುಲ್ ನಾರ್ವೇಕರ್ ಅವರು ಮುಂಬೈನ ಕೊಲಾಬಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಲ್ಲಿ ಹಾಲಿ ಶಾಸಕರಾಗಿದ್ದಾರೆ. * ಅವರು ಪ್ರಸ್ತುತ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿದ್ದಾರೆ ಮತ್ತು ಅವರು ದೇಶದ ಯಾವುದೇ ರಾಜ್ಯದ ಸ್ಪೀಕರ್ ಆಗಿ ಆಯ್ಕೆಯಾದ ಎರಡನೇ ಕಿರಿಯ ವ್ಯಕ್ತಿ ನಾರ್ವೇಕರ್ ಅವರು ಜೂನ್ 2016 ರಲ್ಲಿ ಮಹಾರಾಷ್ಟ್ರ ಲೆಜಿಸ್ಲೇಟಿವ್ ಕೌನ್ಸಿಲ್ಗೆ ರಾಜ್ಯಪಾಲರಿಂದ ನಾಮನಿರ್ದೇಶನಗೊಂಡ ಸದಸ್ಯರಾಗಿ ಆಯ್ಕೆಯಾದರು.* 1960ರಲ್ಲಿ ಮಹಾರಾಷ್ಟ್ರ ರಾಜ್ಯ ರಚನೆಯಾದ ಬಳಿಕ ಬಾಳಾಸಾಹೇಬ್ ಭರಡೆ ಅವರು ಎರಡು ಬಾರಿ ವಿಧಾನಸಭಾ ಸ್ಪೀಕರ್ ಆಗಿದ್ದ ಏಕೈಕ ಸದಸ್ಯರಾಗಿದ್ದರು. ಅದಾದ ಬಳಿಕ ರಾಹುಲ್ ನಾರ್ವೇಕರ್ ಅವರು ಎರಡನೇ ಬಾರಿ ಸ್ಪೀಕರ್ ಆಗಿ ಹೊರಹೊಮ್ಮಿದ್ದಾರೆ.