Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
MGNREGA ಬದಲಿಗೆ 'VB G RAM G' ಮಸೂದೆ ಮಂಡನೆ
17 ಡಿಸೆಂಬರ್ 2025
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಗೆ ಹೊಸ ಸ್ವರೂಪ: 'ದಿ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್'
*
ದೇಶದ ಗ್ರಾಮೀಣ ಪ್ರದೇಶದ ಜನಸಂಖ್ಯೆಗೆ ಉದ್ಯೋಗ ಖಾತ್ರಿ ನೀಡುವ ಮಹತ್ವದ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (MGNREGA) ಬದಲಿಗೆ ಕೇಂದ್ರ ಸರ್ಕಾರವು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಹೊಸ ಮಸೂದೆಯನ್ನು ಮಂಡಿಸಿದೆ.
ಈ ಹೊಸ ಮಸೂದೆಯನ್ನು
'ದಿ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್'
ಎಂದು ಕರೆಯಲಾಗುತ್ತದೆ. ಇದನ್ನು ಸಂಕ್ಷಿಪ್ತವಾಗಿ
'ವಿಬಿ ಜಿ ರಾಮ್ ಜಿ' (VB G RAM G)
ಎಂದು ಹೆಸರಿಸಲಾಗಿದೆ. ಕೇಂದ್ರ ಸರ್ಕಾರದ ಪ್ರಕಾರ, ಈ ಹೊಸ ಮಸೂದೆಯು
ವಿಕಸಿತ ಭಾರತ 2047
ಯೋಜನೆಗೆ ಪೂರಕವಾಗಿ ಹೊಸ ಚೌಕಟ್ಟು ಒದಗಿಸಲಿದೆ.
* MGNREGA ದ ಇತಿಹಾಸ:
NREGA ಆರಂಭ
2005ರಲ್ಲಿ ಅಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು
NREGA (National Rural Employment Guarantee Act)
ಅನ್ನು ಜಾರಿಗೆ ತಂದಿತ್ತು. ನಂತರ ಅಕ್ಟೋಬರ್ 2, 2009 ರಿಂದ ಜಾರಿಗೆ ಬರುವಂತೆ NREGA ಅನ್ನು ಮಹಾತ್ಮ ಗಾಂಧಿಯವರ ಹೆಸರನ್ನು ಸೇರಿಸಿ
MGNREGA
ಎಂದು ಮರುನಾಮಕರಣ ಮಾಡಲಾಯಿತು.
*
ಹೊಸ ಮಸೂದೆಯ ಮಹತ್ವ:
'VB G RAM G' ಮಸೂದೆಯು ಕೇವಲ ಉದ್ಯೋಗ ಖಾತ್ರಿಗಿಂತ ಹೆಚ್ಚಾಗಿ, ಕೌಶಲ್ಯ ಅಭಿವೃದ್ಧಿ ಮತ್ತು ಸುಸ್ಥಿರ ಜೀವನೋಪಾಯದ ಕಡೆಗೆ ಗಮನ ಹರಿಸುವ ಸಾಧ್ಯತೆ ಇದೆ. ಈ ಬದಲಾವಣೆಯು ವಿಕಸಿತ ಭಾರತದ ಗುರಿಯನ್ನು ತಲುಪಲು ಗ್ರಾಮೀಣ ಆರ್ಥಿಕತೆಯಲ್ಲಿ ಗುಣಾತ್ಮಕ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತದೆ ಎಂದು ಸರ್ಕಾರ ತಿಳಿಸಿದೆ.
Take Quiz
Loading...