* ತೆಲಗು ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಯುಕೆಯ ಹೌಸ್ ಆಫ್ ಕಾಮನ್ಸ್ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.* ಲಂಡನ್ ಮೂಲದ ಬ್ರಿಡ್ಜ್ ಇಂಡಿಯಾ ಥಿಂಕ್ಟ್ಯಾಂಕ್, ಸಾಂಸ್ಕೃತಿಕ ಮತ್ತು ಸಾರ್ವಜನಿಕ ಸೇವೆಯ ಕೊಡುಗೆಯನ್ನು ಪರಿಗಣಿಸಿ, ನಟನಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.* ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಬ್ರಿಗೇಡ್ ಇಂಡಿಯಾ, ಗುರುವಾರ ರಾತ್ರಿ (ಮಾರ್ಚ್ 20) ಮಿಶ್ರಾ ಹೌಸ್ ಆಫ್ ಕಾಮನ್ಸ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಬ್ರಿಡ್ಜ್ ಇಂಡಿಯಾ ತನ್ನ ಮೊದಲ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿತು.* ಶುಕ್ರವಾರ ಚಿರಂಜೀವಿ ಎಕ್ಸ್ನಲ್ಲಿ ಸರಣಿ ಪೋಸ್ಟ್ ಮಾಡುತ್ತಾ ತಮ್ಮ ಭಾವನೆ ಹಂಚಿಕೊಂಡಿದ್ದಾರೆ. “ಮಾತನಾಡಲು ಪದಗಳು ಸಿಗುತ್ತಿಲ್ಲ. ನನ್ನ ಪ್ರೀತಿಪಾತ್ರ ಅಭಿಮಾನಿಗಳು, ಸಹೋದರರು, ಸಹೋದರಿಯರು, ಚಿತ್ರರಂಗದ ಕುಟುಂಬ, ಹಿತೈಷಿಗಳು, ಸ್ನೇಹಿತರು ಹಾಗೂ ನನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ, ಮಾನವೀಯ ಕಾರ್ಯಗಳಲ್ಲಿ ಭಾಗಿಯಾಗಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು” ಎಂದು ಅವರು ತಿಳಿಸಿದ್ದಾರೆ.