* ಸ್ವದೇಶಿ ಉತ್ಪನ್ನಗಳಿಗೆ ಸರ್ಕಾರ ಮೇಡ್ ಇನ್ ಇಂಡಿಯಾ ಲೇಬಲ್ ಅನ್ನು ನೀಡುವ ವಿನೂತನ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ.* 'ಮೇಡ್ ಇನ್ ಇಂಡಿಯಾ' ಲೇಬಲ್ ಯೋಜನೆ ಭಾರತದ ಉತ್ಪಾದನಾ ಕ್ಷೇತ್ರಕ್ಕೆ ಬ್ರ್ಯಾಂಡ್ ಮೌಲ್ಯ, ಬಲವಾದ ಗುರುತು ಮತ್ತು ವಿಶಾಲ ಮಾರುಕಟ್ಟೆ ವ್ಯಾಪ್ತಿಯನ್ನು ನೀಡಲು ಆರಂಭಿಸಿದ ಒಂದು ಉಪಕ್ರಮವಾಗಿದೆ.* ಇದು ಭಾರತೀಯ ಉತ್ಪನ್ನಗಳ ಗುಣಮಟ್ಟವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಉದ್ದೇಶ ಹೊಂದಿದೆ. ಈ ಲೇಬಲ್ ಅನ್ನು ಪಡೆದ ಉತ್ಪನ್ನಗಳು ಭಾರತದಲ್ಲಿ ತಯಾರಾಗಿವೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತವೆ ಎಂಬುದನ್ನು ಇದು ಖಚಿತಪಡಿಸುತ್ತದೆ.* ಇದು ಒಂದು ಸ್ವಯಂಪ್ರೇರಿತ ಪ್ರಮಾಣೀಕರಣ ಯೋಜನೆಯಾಗಿದ್ದು, ತಯಾರಕರು ತಮ್ಮ ಉತ್ಪನ್ನಗಳ ಅಧಿಕೃತತೆಯನ್ನು ಗ್ರಾಹಕರಿಗೆ ತೋರಿಸಲು ಸಹಾಯ ಮಾಡುತ್ತದೆ.'ಮೇಡ್ ಇನ್ ಇಂಡಿಯಾ' ಲೇಬಲ್ ಯೋಜನೆಯ ಗುರಿಗಳು:* ಭಾರತದಲ್ಲಿ ತಯಾರಾದ ಉತ್ಪನ್ನಗಳ ಖ್ಯಾತಿಯನ್ನು ಹೆಚ್ಚಿಸುವುದು ಮತ್ತು ಅವುಗಳ ಅಧಿಕೃತತೆಯನ್ನು ಖಚಿತಪಡಿಸುವುದು. ವಿಶೇಷವಾಗಿ ಸ್ಥಳೀಯ ಕಚ್ಚಾ ವಸ್ತುಗಳಿಂದ ತಯಾರಾದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು.* ಪ್ರತಿ ಲೇಬಲ್ನಲ್ಲಿ ಒಂದು QR ಕೋಡ್ ಮತ್ತು ಲೋಗೋ ಇರುತ್ತದೆ. ಇದನ್ನು ಸ್ಕ್ಯಾನ್ ಮಾಡಿ ಗ್ರಾಹಕರು ಉತ್ಪನ್ನದ ಬಗ್ಗೆ ಪ್ರಮುಖ ಮಾಹಿತಿಗಳಾದ ತಯಾರಿಕೆಯ ಸ್ಥಳ, ಲೇಬಲ್ನ ಸಿಂಧುತ್ವ ಮತ್ತು ಇತರ ಉತ್ಪನ್ನ-ನಿರ್ದಿಷ್ಟ ವಿವರಗಳನ್ನು ಪಡೆಯಬಹುದು.* ಈ ಯೋಜನೆಯನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ ಮುನ್ನಡೆಸುತ್ತಿದ್ದು, ಭಾರತೀಯ ಗುಣಮಟ್ಟ ಮಂಡಳಿ ಮತ್ತು ಇಂಡಿಯಾ ಬ್ರಾಂಡ್ ಇಕ್ವಿಟಿ ಫೌಂಡೇಶನ್ ಸಲಹಾ ಪಾತ್ರ ವಹಿಸುತ್ತಿವೆ.* ಉತ್ಪನ್ನದ ಮೂಲದ ಆಧಾರದ ಮೇಲೆ ಅದಕ್ಕೆ ಒಂದು ಗುರುತನ್ನು ಒದಗಿಸುವುದು. ಭಾರತೀಯ ಮೂಲದ ಉತ್ಪನ್ನಗಳನ್ನು ಅರ್ಹಗೊಳಿಸಲು ಮತ್ತು ಬ್ರಾಂಡ್ ಮಾಡಲು ಒಂದು ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವುದು.* ಭಾರತೀಯ ಮೂಲದ ಉತ್ಪನ್ನಗಳನ್ನು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಗುರುತಿಸಲು ಸಹಾಯ ಮಾಡುವುದು.* 'ಮೇಡ್ ಇನ್ ಇಂಡಿಯಾ' ಲೇಬಲ್ ಮೂಲಕ ಉತ್ಪನ್ನದ ಅಧಿಕೃತತೆ, ಗುಣಮಟ್ಟ ಮತ್ತು ಇತರ ಉತ್ಪನ್ನಗಳಿಂದ ಭಿನ್ನತೆಯನ್ನು ತೋರಿಸುವ ಮೂಲಕ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅದರ ಸ್ಥಾನವನ್ನು ಬಲಪಡಿಸುವುದು.