* ಈ ವರ್ಷ ನಡೆಯುವ 72ನೇ ವಿಶ್ವ ಸುಂದರಿ ಸ್ಪರ್ಧೆಯನ್ನು ತೆಲಂಗಾಣ ರಾಜ್ಯ ಆತಿಥ್ಯಪೂರ್ತಿಯಾಗಿ ಆಯೋಜಿಸುತ್ತಿದೆ.* ಮೇ 7ರಿಂದ ಮೇ 31ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ವಿಶ್ವ ಸುಂದರಿ ಸ್ಪರ್ಧೆಯು ಬಿನ್ನ ಬಿನ್ನ ಹಂತಗಳಲ್ಲಿ ಆಯೋಜಿಸಲಾಗುವುದು.* ಮಿಸ್ ವರ್ಲ್ಡ್ ಲಿಮಿಟೆಡ್ ಅಧ್ಯಕ್ಷೆ ಜೂಲಿಯಾ ಮಾರ್ಲಿ ಮತ್ತು ತೆಲಂಗಾಣ ಸರ್ಕಾರದ ಕಾರ್ಯದರ್ಶಿ ಸ್ಮಿತಾ ಸಭರ್ವಾಲ್ ಮಿಸ್ ವರ್ಲ್ಡ್ ಸ್ಪರ್ಧೆಯ ಅಧಿಕೃತ ಘೋಷಣೆ ಮಾಡಿದರು.* ಹೈದರಾಬಾದ್ನಲ್ಲಿ ಸ್ಪರ್ಧೆಯ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳು ನಿಗದಿಯಾಗಿವೆ. ಮೇ 31ರಂದು ವಿಶ್ವ ಸುಂದರಿ ಕಿರೀಟ ಯಾರಿಗೆ ಎನ್ನುವುದು ಗೊತ್ತಾಗಲಿದೆ.* ಮಿಸ್ ವರ್ಲ್ಡ್ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯೂಲಿಯಾ ಮೋರ್ಲಿ ಹಾಗೂ ತೆಲಂಗಾಣ ಪ್ರವಾಸೋದ್ಯಮ ಕಾರ್ಯದರ್ಶಿ ಸ್ಮಿತಾ ಸಭರ್ವಾಲ್ ಬುಧವಾರ(ಫೆ.19) ಜಂಟಿಯಾಗಿ ಸ್ಪರ್ಧೆಯನ್ನು ಅಧಿಕೃತವಾಗಿ ಪ್ರಕಟಿಸಿದರು.* 120 ದೇಶಗಳಿಂದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಮೇ 7ರಂದು ಸೌಂದರ್ಯವತಿಯರು ಬರಲಿದ್ದಾರೆ.* ತೆಲಂಗಾಣ ಸರ್ಕಾರದೊಂದಿಗೆ ಪಾಲುದಾರಿಕೆ ಮೂಲಕ ಅದರ ಪರಂಪರೆ ಮತ್ತು ಕ್ರಿಯಾತ್ಮಕತೆಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಅವಕಾಶ ಸಿಕ್ಕಿದೆ ಎಂದು ಮಿಸ್ ವರ್ಲ್ಡ್ ಸಂಸ್ಥೆ ತಿಳಿಸಿದೆ. ಈ ಸ್ಪರ್ಧೆ ಕೇವಲ ಸೌಂದರ್ಯದ ಬಗ್ಗೆ ಅಲ್ಲ, ಸಮುದಾಯ ಸಬಲೀಕರಣ ಮತ್ತು ವೈವಿಧ್ಯತೆಯ ಆಚರಣೆಯನ್ನೂ ಉದ್ದೇಶಿಸಿದೆ.* ತೆಲಂಗಾಣದ ಕೈಮಗ್ಗ ಪರಂಪರೆ, ಪ್ರವಾಸಿ ತಾಣಗಳು, ಪಾಕಪದ್ಧತಿ ಹಾಗೂ ಕಲೆಗಳನ್ನು ಹೈಲೈಟ್ ಮಾಡುವ ಈ ಈವೆಂಟ್ನಲ್ಲಿ 120 ಕ್ಕೂ ಹೆಚ್ಚು ದೇಶಗಳಿಂದ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.* ಸ್ಪರ್ಧೆಯ ಧ್ಯೇಯ 'ಬ್ಯೂಟಿ ವಿಥ್ ಎ ಪರ್ಪಸ್' ಗೆ ಅನುಗುಣವಾಗಿ ಸ್ಪರ್ಧಿಗಳು ಅರ್ಥಪೂರ್ಣ ಉದ್ದೇಶಗಳಿಗಾಗಿ ಸ್ಪರ್ಧಿಸಲಿದ್ದಾರೆ.* ಹಾಲಿ ವಿಶ್ವ ಸುಂದರಿ ಜೆಕಿಯಾದ ಕ್ರಿಸ್ಟಿನಾ ಪಿಸ್ಜ್ಕೋವಾ ತಮ್ಮ ಉತ್ತರಾಧಿಕಾರಿಗೆ ಕಿರೀಟ ಧಾರಣೆ ಮಾಡಲಿದ್ದಾರೆ.