* ಪ್ರತಿ ವರ್ಷ ಮೇ 7 ರಂದು 'ವಿಶ್ವ ಅಥ್ಲೆಟಿಕ್ಸ್ ದಿನ'ವನ್ನು ಆಚರಿಸಲಾಗುತ್ತದೆ. ಮಕ್ಕಳು ಮತ್ತು ಯುವಕರಲ್ಲಿ ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅಥ್ಲೆಟಿಕ್ಸ್ ಆಟಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 'ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್' (IAAF) ಈ ದಿನದ ಆಚರಣೆಯನ್ನು ಪ್ರಾರಂಭಿಸಿತು. * 2025ರ ವಿಶ್ವ ಅಥ್ಲೆಟಿಕ್ಸ್ ದಿನದ ಥೀಮ್ "ರಿಲೇ ಅರೌಂಡ್ ದಿ ವರ್ಲ್ಡ್" ಎಂಬುವುದಾಗಿದೆ.* ರೋಗಗಳನ್ನು ತಡೆಗಟ್ಟುವ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಾಧನವಾಗಿ ಕ್ರೀಡೆ ಮತ್ತು ವ್ಯಾಯಾಮವನ್ನು ಉತ್ತೇಜಿಸುವುದು ಈ ದಿನದ ಉದ್ದೇಶವಾಗಿದೆ. * ಮೊಟ್ಟ ಮೊದಲ ಬಾರಿಗೆ ವಿಶ್ವ ಅಥ್ಲೆಟಿಕ್ಸ್ ದಿನವನ್ನು ಮೇ 15, 1996 ರಂದು 50 ದೇಶಗಳ ಭಾಗವಹಿಸುವಿಕೆಯೊಂದಿಗೆ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ ಅಂದಿನ ಅಧ್ಯಕ್ಷರಾದ ಪ್ರಿಮೊ ನೆಬಿಯೊಲೊ ಅವರು ಪರಿಚಯಿಸಿದರು. * ವಿಶ್ವ ಅಥ್ಲೆಟಿಕ್ಸ್ ದಿನವನ್ನು ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ (ಐಎಎಎಫ್) ಆಯೋಜಿಸಿ ಜೊತೆಗೆ ಪ್ರಾಯೋಜಿಸಿದೆ.* ಅಂತರರಾಷ್ಟ್ರೀಯ ಹವ್ಯಾಸಿ ಅಥ್ಲೆಟಿಕ್ ಫೆಡರೇಶನ್ (IAAF) ಅನ್ನು 1912 ರಲ್ಲಿ ವಿವಿಧ ಕ್ರೀಡಾಕೂಟಗಳು ಮತ್ತು ಅಥ್ಲೆಟಿಕ್ಸ್ಗಳನ್ನು ಆಯೋಜಿಸಲು ಸ್ಥಾಪಿಸಲಾಯಿತು. * 2001 ರಲ್ಲಿ ಅಂತರರಾಷ್ಟ್ರೀಯ ಹವ್ಯಾಸಿ ಅಥ್ಲೆಟಿಕ್ ಫೆಡರೇಶನ್ (IAAF) ಹೆಸರನ್ನು ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಶನ್ಗಳ ಸಂಘ ಎಂದು ಬದಲಾಯಿಸಲಾಯಿತು. ಮತ್ತು 2019 ರಲ್ಲಿ ಹೆಸರನ್ನು ಮತ್ತೆ ವಿಶ್ವ ಅಥ್ಲೆಟಿಕ್ಸ್ ಎಂದು ಬದಲಾಯಿಸಲಾಯಿತು.