* ಈ ವರ್ಷ ಮೇ 30 ರಂದು ಪ್ರಪಂಚದಾದ್ಯಂತ 2ನೇ ಅಂತರರಾಷ್ಟ್ರೀಯ ಆಲೂಗಡ್ಡೆ ದಿನವನ್ನು ಆಚರಿಸುತ್ತದೆ. ಡಿಸೆಂಬರ್ 2023 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ವಾರ್ಷಿಕವಾಗಿ ಮೇ 30 ಅನ್ನು ಅಂತರರಾಷ್ಟ್ರೀಯ ಆಲೂಗಡ್ಡೆ ದಿನ ಎಂದು ಗೊತ್ತುಪಡಿಸಿತು. * ಅಂತರಾಷ್ಟ್ರೀಯ ಆಲೂಗಡ್ಡೆ ದಿನದ 2025 ರ "ಇತಿಹಾಸವನ್ನು ರೂಪಿಸುವುದು, ಭವಿಷ್ಯವನ್ನು ಪೋಷಿಸುವುದು" ಥೀಮ್ ಆಗಿದೆ.* ಆಲೂಗಡ್ಡೆಯ ಅಪಾರ ಪೌಷ್ಟಿಕಾಂಶ, ಆರ್ಥಿಕ, ಪರಿಸರ ಮತ್ತು ಸಾಂಸ್ಕೃತಿಕ ಮೌಲ್ಯದ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.* ವಿಶ್ವದಲ್ಲಿ 5,000 ಬಗೆಯ ಆಲೂಗಡ್ಡೆ ತಳಿಗಳಿವೆ. ಆಲೂಗಡ್ಡೆ ತನ್ನ ಮೂಲವನ್ನು ದಕ್ಷಿಣ ಅಮೆರಿಕಾದ ಆಂಡಿಸ್ ಪ್ರದೇಶದಲ್ಲಿ ಹೊಂದಿದೆ.* ಚೀನಾ ಮತ್ತು ಭಾರತವು ವಿಶ್ವದ ಒಟ್ಟು ಬೆಳೆಯ ಮೂರನೇ ಒಂದು ಭಾಗದಷ್ಟು ಉತ್ಪಾದನೆ ಮಾಡುತ್ತಿದ್ದು, ವಾರ್ಷಿಕವಾಗಿ 9.5 ಕೋಟಿ ಟನ್ ಉತ್ಪಾದನೆ ಮಾಡುತ್ತಿರುವ ಚೀನಾ ಪ್ರಥಮ ಸ್ಥಾನದಲ್ಲಿದ್ದರೆ, 5.4 ಕೋಟಿ ಟನ್ ಉತ್ಪಾದನೆ ಮಾಡುತ್ತಿರುವ ಭಾರತವು ಎರಡನೇ ಸ್ಥಾನದಲ್ಲಿದ್ದರೆ ಮತ್ತು 20 ಲಕ್ಷ ಟನ್ ಆಲೂಗಡ್ಡೆ ಬೆಳೆಯುವ ಉಕ್ರೇನ್ ಮೂರನೇ ಸ್ಥಾನದಲ್ಲಿದೆ.* ವಿಟಮಿನ್ 'ಸಿ' ಜೊತೆಗೆ ಪೊಟ್ಯಾಶಿಯಂ, ಪಿಷ್ಟ ಪದಾರ್ಥ, ವಿಟಮಿನ್ 'ಬಿ6' ಮತ್ತು ದ ಖನಿಜಾಂಶಗಳು ಹೇರಳವಾಗಿರುವ ಆಲೂಗೆಡ್ಡೆಯು ಹೃದಯದ ಆರೋಗ್ಯ, ಮಾಂಸಖಂಡಗಳು ಮತ್ತು ನರಮಂಡಲದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನೆರವಾಗುತ್ತದೆ.* ಆಲೂಗೆಡ್ಡೆ ಬೆಳೆಯುವ ವಿಷಯದಲ್ಲಿ ಹತ್ತನೇ ಸ್ಥಾನದಲ್ಲಿರುವ ನೆದರ್ಲ್ಯಾಂಡ್ಸ್, ಬೆಳೆಯನ್ನು ರಫ್ತು ಮಾಡುವ ದೇಶಗಳ ಪೈಕಿ ಪ್ರಥಮ ಸ್ಥಾನದಲ್ಲಿದೆ. ನಮ್ಮ ಉತ್ತರಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಅಲೂಗೆಡ್ಡೆ ಬೆಳೆಯುವ ರಾಜ್ಯವೆನಿಸಿದೆ.