* ಪ್ರತಿ ವರ್ಷ ವಾರ್ಷಿಕವಾಗಿ ಮೇ 29 ರಂದು ಯುಎನ್ ಶಾಂತಿಪಾಲಕರ ಅಂತರರಾಷ್ಟ್ರೀಯ ದಿನವನ್ನು ಪ್ರಪಂಚದಾದ್ಯಂತ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ವಿಶ್ವಸಂಸ್ಥೆಯ (UN) ಶಾಂತಿಪಾಲಕರ ಕೊಡುಗೆಗಳು ಮತ್ತು ತ್ಯಾಗಗಳನ್ನು ಗೌರವಿಸಲು ಇದು ಮೀಸಲಾದ ದಿನವಾಗಿದ್ದು, ಈ ದಿನವನ್ನು UN ಶಾಂತಿಪಾಲಕರ ಅಂತರರಾಷ್ಟ್ರೀಯ ದಿನವೆಂದು ಆಚರಿಸಲಾಗಿತ್ತದೆ.* ಯುಎನ್ ಶಾಂತಿಪಾಲಕರ ಅಂತರಾಷ್ಟ್ರೀಯ ದಿನವು ಯುಎನ್ ಜನರಲ್ ಅಸೆಂಬ್ಲಿಯೊಂದಿಗೆ ಪ್ರಾರಂಭವಾಯಿತು. 2002 ರಲ್ಲಿ ಜನರಲ್ ಅಸೆಂಬ್ಲಿಯು ಶಾಂತಿಯ ಸೇವೆಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡ ಶಾಂತಿಪಾಲಕರ ಸ್ಮರಣೆಯನ್ನು ಗೌರವಿಸಲು ಮೇ 29 ಅನ್ನು ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಡೇ ಆಫ್ ಪೀಸ್ಕೀಪರ್ಸ್ ಎಂದು ಗೊತ್ತುಪಡಿಸಿತು.* ಮೇ 29, 1948 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇಸ್ರೇಲಿ-ಪ್ಯಾಲೆಸ್ಟಿನಿಯನ್ ಸಂಘರ್ಷದಲ್ಲಿ ಕದನ ವಿರಾಮವನ್ನು ಮೇಲ್ವಿಚಾರಣೆ ಮಾಡಲು ಯುನೈಟೆಡ್ ನೇಷನ್ಸ್ ಟ್ರೂಸ್ ಸೂಪರ್ವಿಷನ್ ಆರ್ಗನೈಸೇಶನ್ (UNTSO) ಸ್ಥಾಪನೆಗೆ ಅಧಿಕಾರ ನೀಡಿತು.