* ಪ್ರಪಂಚದಾದ್ಯಂತ ಮೇ 21 ರಂದು ಅಂತಾರಾಷ್ಟ್ರೀಯ ಚಹಾ ದಿನವನ್ನು ಚಹಾದ ಸುದೀರ್ಘ ಇತಿಹಾಸ ಮತ್ತು ಸಾಂಸ್ಕೃತಿಕ ಮಹತ್ವವನ್ನು ಆಚರಿಸಲು ಮತ್ತು ಹಸಿವು ಮತ್ತು ಬಡತನದ ವಿರುದ್ಧ ಹೋರಾಡುವಲ್ಲಿ ಚಹಾದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಈ ದಿನವು ಆಚರಿಸಲಾಗುತ್ತದೆ.* 2015 ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ವಿಶ್ವಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಚಹಾ ದಿನವನ್ನು ಆಚರಿಸಲು ಅಧಿಕೃತವಾಗಿ ಪ್ರಸ್ತಾಪಿಸಿತು. ಆ ಬಳಿಕ ಅಂತರರಾಷ್ಟ್ರೀಯ ಚಹಾ ದಿನವನ್ನು ಮೊದಲ ಬಾರಿಗೆ ಮೇ 21, 2020 ರಂದು ಆಚರಿಸಲಾಯಿತು. ಅಂದಿನಿಂದ ಈ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ.* ಅಂತಾರಾಷ್ಟ್ರೀಯ ಚಹಾ ದಿನದ ಮೊದಲ ಆಚರಣೆಯು 2005 ರಲ್ಲಿ ಪ್ರಾರಂಭವಾಯಿತು.* ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು 2019 ರಲ್ಲಿ ಮೇ 21 ಅನ್ನು ಅಂತಾರಾಷ್ಟ್ರೀಯ ಚಹಾ ದಿನವೆಂದು ಘೋಷಿಸಲಾಯಿತ್ತು. ಜನಪ್ರಿಯ ದಂತಕಥೆಯ ಪ್ರಕಾರ, 2737 BCE ನಲ್ಲಿ, ಚಕ್ರವರ್ತಿ ಶೆನ್ ನಾಂಗ್ ನೀರನ್ನು ಕುದಿಸುತ್ತಿದ್ದಾಗ ಹತ್ತಿರದ ಕ್ಯಾಮೆಲಿಯಾ ಸೈನೆನ್ಸಿಸ್ ಮರದ ಎಲೆಗಳು ಅವನ ಮಡಕೆಗೆ ಬಿದ್ದವು ಎಂಬ ಕುತೂಹಲ ಕೆರಳಿಸಿದೆ. * ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದಿಂದ ರಚಿಸಲಾದ ಚಹಾವು ನೀರಿನ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಸೇವಿಸುವ ಪಾನೀಯವಾಗಿದೆ .