* ಜೇನು ಸಾಕಣೆಯ ಪ್ರವರ್ತಕ ಆಂಟನ್ ಜನ್ಸಾ ಅವರ ಜನ್ಮದಿನದ ನೆನಪಿಗಾಗಿ ವಿಶ್ವಸಂಸ್ಥೆಯು ಮೇ 20ರಂದು 'ವಿಶ್ವ ಜೇನು ನೊಣ ದಿನ'ವನ್ನಾಗಿ ಆಚರಿಸಲು ನಿರ್ಧರಿಸಿದೆ. 2016ರಲ್ಲಿ ಅಪಿಮೊಂಡಿಯಾ ಬೆಂಬಲದೊಂದಿಗೆ ಮೇ 20 ಅನ್ನು ವಿಶ್ವ ಜೇನು ನೊಣಗಳ ದಿನವನ್ನಾಗಿ ಆಚರಿಸಲು ಪ್ರಸ್ತಾಪಿಸಿತು. ವಿಶ್ವಸಂಸ್ಥೆಯಿಂದ ಅನುಮೋದಿಸಲ್ಪಟ್ಟ ಮೊದಲ ವಿಶ್ವ ಜೇನುನೊಣ ದಿನವನ್ನು ಮೇ 20, 2018 ರಂದು ಆಚರಿಸಲಾಯಿತು. * ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು 2017 ರ ಡಿಸೆಂಬರ್ನಲ್ಲಿ ವಿಶ್ವ ಜೇನುನೊಣ ದಿನಾಚರಣೆಯ ಪ್ರಸ್ತಾಪವನ್ನು ಅಂಗೀಕರಿಸಿದವು.* ವಿಶ್ವ ಜೇನುನೊಣ ದಿನದ ಉದ್ದೇಶ ಪರಿಸರ ವ್ಯವಸ್ಥೆಯಲ್ಲಿ ಜೇನುನೊಣಗಳ ಪಾತ್ರವನ್ನು ಅಂಗೀಕರಿಸುವುದು. * ದೇಶದಲ್ಲಿ ಸಿಹಿ ಕ್ರಾಂತಿಯ ಗುರಿ ಸಾಧಿಸಲು ವೈಜ್ಞಾನಿಕ ಜೇನುಸಾಕಣೆಯ ಪ್ರಚಾರ ಮತ್ತು ಅಭಿವೃದ್ಧಿಗಾಗಿ ರಾಷ್ಟ್ರೀಯ ಜೇನುಸಾಕಣೆ ಮತ್ತು ಹನಿ ಮಿಷನ್ (ಎನ್ಬಿಎಚ್ಎಂ) ಎಂಬ ಹೊಸ ಯೋಜನೆಗೆ ಭಾರತ ಸರ್ಕಾರ ಅನುಮೋದನೆ ನೀಡಿದೆ.* 2025 ರ ವಿಶ್ವ ಜೇನುನೊಣ ದಿನದ ಥೀಮ್ "ನಮ್ಮೆಲ್ಲರನ್ನೂ ಪೋಷಿಸಲು ಪ್ರಕೃತಿಯಿಂದ ಪ್ರೇರಿತವಾದ ಜೇನುನೊಣಗಳು" ಎಂಬ ಥೀಮ್ ನ ಅಡಿಯಲ್ಲಿ ಈ ವರ್ಷದ ವಿಶ್ವ ಜೇನುನೊಣ ದಿನವನ್ನು ಆಚರಿಸಲಾಯಿತು.