* ಪ್ರತಿ ವರ್ಷ ಮೇ 16 ರಂದು ಸೊಳ್ಳೆಗಳಿಂದ ಹರಡುವ ರೋಗದ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸಲಾಗಿದ್ದು, ಡೆಂಗ್ಯೂ ನಾಲ್ಕು ವಿಭಿನ್ನ ವೈರಸ್‌ಗಳಿಂದ ಉಂಟಾಗುತ್ತದೆ ಮತ್ತು ಹೆಣ್ಣು ಈಡಿಸ್ ಸೊಳ್ಳೆಗಳಿಂದ, ಹಳದಿ ಜ್ವರ, ಜಿಕಾ ವೈರಸ್‌ಗಳು ಮತ್ತು ಚಿಕೂನ್‌ಗುನ್ಯಾವನ್ನು ಸಹ ಹರಡುತ್ತದೆ.* ರಾಷ್ಟ್ರೀಯ ಡೆಂಗ್ಯೂ ದಿನದ 2024 ರ ಥೀಮ್ 'ಡೆಂಗ್ಯೂ ತಡೆಗಟ್ಟುವಿಕೆ: ಸುರಕ್ಷಿತ ನಾಳೆಗಾಗಿ ನಮ್ಮ ಜವಾಬ್ದಾರಿ'. ಎಂಬುದು ಥೀಮ್ ಆಗಿದೆ.* ಲ್ಯಾನ್ಸೆಟ್ ಅಧ್ಯಯನದ ಪ್ರಕಾರ ಮಾಹಿತಿಯು ಕಳೆದ ವರ್ಷದ ಜನವರಿ ಮತ್ತು ಅಕ್ಟೋಬರ್ ನಡುವೆ ಭಾರತದಲ್ಲಿ ಸುಮಾರು 1,10,473 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ಸೂಚಿಸುತ್ತದೆ.* 2024ರ ಆರಂಭದಿಂದ ಜಾಗತಿಕವಾಗಿ 69 ದೇಶಗಳಲ್ಲಿ 5 ಮಿಲಿಯನ್ ಡೆಂಗೆ ಪ್ರಕರಣಗಳು ಪತ್ತೆಯಾಗಿವೆ. 2 ಸಾವಿರ ಡೆಂಗೆ ಸಂಬಂಧಿತ ಸಾವುಗಳು ಸಂಭವಿಸಿವೆ ಎಂದು ಡಬ್ಲ್ಯುಎಚ್‌ಒ ವರದಿ ತಿಳಿಸಿದೆ. * 2022ರಲ್ಲಿ ಭಾರತದಲ್ಲಿ ಒಟ್ಟು 2.3 ಲಕ್ಷ ಡೆಂಗೆ ಪ್ರಕರಣಗಳು ವರದಿಯಾಗಿವೆ. 2023ರಲ್ಲಿ ದೇಶದಲ್ಲಿ ಶೇ.62ರಷ್ಟು ಹೆಚ್ಚಿದೆ. ಕರ್ನಾಟಕದಲ್ಲಿ 2022ರಲ್ಲಿ 11,576, 2023ರಲ್ಲಿ 9,889 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.