* ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೈನ್ಸೋಲಾ ಗ್ರಾಮದಲ್ಲಿ ದೇಶದ ಮೊದಲ ‘ಪಿ.ಎಂ ಮಿತ್ರ ಪಾರ್ಕ್’ಗೆ ಶಿಲಾನ್ಯಾಸ ನೆರವೇರಿಸಿದರು.* ಜವಳಿ ಮತ್ತು ಸಿದ್ಧ ಉಡುಪುಗಳ ವಲಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಈ ಯೋಜನೆ ಕೈಗೊಂಡಿದೆ. ಇದೇ ಸಂದರ್ಭದಲ್ಲಿ ಅವರು ‘ಸ್ವಸ್ಥ ನಾರಿ–ಸಶಕ್ತ ಪರಿವಾರ’ ಮತ್ತು ‘ರಾಷ್ಟ್ರೀಯ ಪೋಷಣ ಮಾಹ’ ಅಭಿಯಾನಕ್ಕೂ ಚಾಲನೆ ನೀಡಿದರು.* ಕೇಂದ್ರ ಸರ್ಕಾರ ಕರ್ನಾಟಕ, ಮಧ್ಯಪ್ರದೇಶ, ತೆಲಂಗಾಣ, ಗುಜರಾತ್, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ಏಳು ರಾಜ್ಯಗಳಲ್ಲಿ ಇಂತಹ ಬೃಹತ್ ಜವಳಿ ಪಾರ್ಕ್ಗಳನ್ನು ನಿರ್ಮಿಸುವ ಉದ್ದೇಶ ಹೊಂದಿದೆ.ಪಾರ್ಕ್ ವೈಶಿಷ್ಟ್ಯಗಳು:- 2,158 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿ- ₹23,146 ಕೋಟಿ ಹೂಡಿಕೆ ಪ್ರಸ್ತಾವ- ಪ್ರತಿದಿನ 20 ಮೆಗಾ ಲೀಟರ್ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ- 10 ಎಂವಿಎ ಸೌರಶಕ್ತಿ ವಿದ್ಯುತ್ ಘಟಕ- ಕಾರ್ಮಿಕರು ಹಾಗೂ ಮಹಿಳೆಯರಿಗೆ ವಸತಿ ಮತ್ತು ಭದ್ರತಾ ಸೌಲಭ್ಯಗಳು* ಈ ಪಾರ್ಕ್ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಹೊಂದಿದ್ದು, ಹತ್ತಿ ಬೆಳೆಗಾರರು ಮತ್ತು ಜವಳಿ ಕ್ಷೇತ್ರದ ಉದ್ದಿಮೆಗಳಿಗೆ ಮಹತ್ವದ ವರದಾನವಾಗಲಿದೆ.