* ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನೇತೃತ್ವದ ಮಧ್ಯಪ್ರದೇಶ ಸರ್ಕಾರವು ‘ಬೃಂದಾವನ ಗ್ರಾಮ’ ಎಂಬ ಹೊಸ ಯೋಜನೆಗೆ ಸೆಪ್ಟೆಂಬರ್ 03 ರಂದು ಅನುಮೋದನೆ ನೀಡಿದೆ. * ಕೃಷ್ಣಾ ಜನ್ಮಾಷ್ಟಮಿಯಂದು (ಆಗಸ್ಟ್ 26) ಔಪಚಾರಿಕವಾಗಿ ಘೋಷಿಸಲಾದ ಈ ಉಪಕ್ರಮವು ಆಯ್ದ ಗ್ರಾಮ ಪಂಚಾಯತಿಗಳನ್ನು ಮಾದರಿ ಗ್ರಾಮಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ, ಗೋಸಂರಕ್ಷಣೆ ಮತ್ತು ಗ್ರಾಮೀಣ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ.* ಮಧ್ಯಪ್ರದೇಶದ 313 ಬ್ಲಾಕ್‌ಗಳಿಂದ ತಲಾ ಒಂದು ಗ್ರಾಮ ಪಂಚಾಯಿತಿ ಆಯ್ಕೆಯಾಗಲಿದೆ. ಆಯ್ಕೆಯಾದ ಪಂಚಾಯಿತಿಗಳನ್ನು ಅಧಿಕೃತವಾಗಿ ‘ಬೃಂದಾವನ ಗ್ರಾಮ’ ಎಂದು ಮರುನಾಮಕರಣ ಮಾಡಲಾಗುತ್ತದೆ.* 'ಬೃಂದಾವನ ಗ್ರಾಮ' ಯೋಜನೆಯು ಹಳ್ಳಿಗಳಲ್ಲಿ ಹಾಲು ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. * ಆಯ್ದ ಗ್ರಾಮ ಪಂಚಾಯಿತಿಗಳಲ್ಲಿನ ಮನೆಗಳಿಗೆ ರೂಫ್-ಟಾಪ್ ಸೋಲಾರ್ ನೀತಿಯೊಂದಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ ಅವರು ತಿಳಿಸಿದರು.