* ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸಚಿವ ಸಂಪುಟವನ್ನು ಡಿಸೆಂಬರ್ 25 ರಂದು ವಿಸ್ತರಣೆ ಮಾಡಿದ್ದು, ಮಾಜಿ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಸೇರಿದಂತೆ 28 ಶಾಸಕರು 2023 ಡಿಸೆಂಬರ್ 26 ರಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.* ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಮಂಗೂಭಾಯ್ ಪಟೇಲ್ ಅವರು ಪ್ರಮಾಣ ವಚನ ಬೋಧಿಸಿದರು.*  ಮೋಹನ್ ಯಾದವ್ ಅವರ ಸಂಪುಟದ 28 ಮಂದಿ ಪೈಕಿ 18 ಮಂದಿ ಸಂಪುಟ ದರ್ಜೆ ಸಚಿವರಾಗಿ, 10 ಮಂದಿ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.* ಡಿಸೆಂಬರ್ 25 ರಂದು ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ನಿರ್ಮಲಾ ಭೂರಿಯಾ, ನಾರಾಯಣ ಕುಶ್ವಾಹಾ ಮತ್ತು ನಾಗರ್ ಸಿಂಗ್ ಚೌಹಾಣ್ ಸೇರಿದ್ದಾರೆ. ಭೂರಿಯಾ ಅವರು ಈ ಹಿಂದೆ ಕಿರಿಯ ಆರೋಗ್ಯ ಸಚಿವರಾಗಿದ್ದರು. ಕುಶ್ವಾಹಾ ಅವರು ಕಿರಿಯ ಗೃಹ ಸಚಿವರಾಗಿದ್ದರು.* ವಿಜಯ್ ಶಾ, ಕರಣ್ ಸಿಂಗ್ ವರ್ಮಾ, ರಾಕೇಶ್ ಸಿಂಗ್, ವಿಶ್ವಸ್ ಸಾರಂಗ್, ರಾಕೇಶ್ ಶುಕ್ಲಾ, ಚೈತನ್ಯ ಕಶ್ಯಪ್, ಇಂದರ್ ಸಿಂಗ್ ಪರ್ಮಾರ್, ಮತ್ತು ಉದಯ್ ಪ್ರತಾಪ್ ಸಿಂಗ್ ಅವರಂತೆ ಬುಡಕಟ್ಟು ನಾಯಕ ಸಂಪತಿಯ ಉಯಿಕೇ, ಪ್ರದ್ಯುಮನ್ ಸಿಂಗ್ ತೋಮರ್, ತುಳಸಿ ರಾಮ್ ಸಿಲಾವತ್, ಗೋವಿಂದ್ ಸಿಂಗ್ ರಜಪೂತ್, ಐದಲ್ ಸಿಂಗ್ ಕಂಸನಾ ಅವರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.* ಮಧ್ಯಪ್ರದೇಶ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಪಡೆಯುವ ಮೂಲಕ ಡಿಸೆಂಬರ್ 13 ರಂದು ಮೋಹನ್ ಯಾದವ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.