Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಮಧ್ಯಧರಾ ಸಮುದ್ರ : ಎರಡು ಖಂಡಗಳನ್ನು ಜೋಡಿಸುವ ಮತ್ತು ಬೇರ್ಪಡಿಸುವ ನೀಲಿ ಜಾಗತಿಕ ಮಾರ್ಗ
20 ನವೆಂಬರ್ 2025
* ಪ್ರಾಕೃತಿಕ ಭೂಗೋಳಶಾಸ್ತ್ರದಲ್ಲಿ ಖಂಡಗಳನ್ನು ಬೇರ್ಪಡಿಸುವ ಸಮುದ್ರಗಳು ವಿಶ್ವದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಯೂರೋಪ್ ಮತ್ತು ಆಫ್ರಿಕಾ
ಎಂಬ ಎರಡು ಮಹತ್ವದ ಖಂಡಗಳನ್ನು
ಬೇರ್ಪಡಿಸುವ ಜಲಪ್ರದೇಶವೇ ಮಧ್ಯ ಧರಾ ಸಮುದ್ರ
(Mediterranean Sea
). ಇದು ಕೇವಲ ಜಲಸಂಪತ್ತಿನ ಕೇಂದ್ರವಲ್ಲ, ಮಾನವ ನಾಗರಿಕತೆಯ ಬೆನ್ನೆಲುಬಾಗಿ ಸಾವಿರಾರು ವರ್ಷಗಳಿಂದ ಅಭಿವೃದ್ಧಿಯನ್ನು ಉತ್ತೇಜಿಸಿದೆ.
* ಮಧ್ಯ ಧರಾ ಸಮುದ್ರವು ಯೂರೋಪ್ನ ದಕ್ಷಿಣ ಕರಾವಳಿಗಳಾದ ಸ್ಪೇನ್, ಫ್ರಾನ್ಸ್, ಇಟಲಿ, ಗ್ರೀಸ್ ಮುಂತಾದ ರಾಷ್ಟ್ರಗಳು ಮತ್ತು ಆಫ್ರಿಕಾ ಖಂಡದ ಉತ್ತರ ಭಾಗದಲ್ಲಿರುವ ಮೊರೊಕ್ಕೊ, ಅಲ್ಜೀರಿಯಾ, ಟುನೀಷಿಯಾ, ಲಿಬಿಯಾ, ಈಜಿಪ್ಟ್ ದೇಶಗಳ ನಡುವೆ ಹರಡಿಕೊಂಡಿದೆ.
* ಈ ಸಮುದ್ರವು ಸುಮಾರು 2,500 ಮೈಲು ಉದ್ದವಿದ್ದು, ತನ್ನ ವಿಶಾಲ ವ್ಯಾಪ್ತಿಯಿಂದ ಖಂಡಗಳನ್ನು ಸ್ಪಷ್ಟವಾಗಿ ಬೇರ್ಪಡಿಸುತ್ತದೆ.
*
ಮಧ್ಯ ಧರಾ ಸಮುದ್ರವು ಪಶ್ಚಿಮ ದಿಕ್ಕಿನಲ್ಲಿ ಜಿಬ್ರಾಲ್ಟರ್ ಜಲಸಂಧಿ (Strait of Gibraltar) ಮೂಲಕ ಅಟ್ಲಾಂಟಿಕ್ ಮಹಾಸಾಗರಕ್ಕೆ ಸೇರುತ್ತದೆ.
ಈ ಜಲಸಂಧಿಯ ಎರಡೂ ಬದಿಯಲ್ಲಿ
ಸ್ಪೇನ್ (ಯೂರೋಪ್)
ಮತ್ತು
ಮೊರೊಕ್ಕೊ (ಆಫ್ರಿಕಾ)
ದೇಶಗಳಿದ್ದು, ಇದು ಎರಡು ಖಂಡಗಳ ಮಧ್ಯದ ಅತ್ಯಂತ ಸುಲಭ
ಸಂಪರ್ಕ ಮಾರ್ಗವಾಗಿದೆ.
* ಸಂಕುಲವಾದ
ಈ ಜಲಸಂಧಿಯ ಅಗಲ ಕೇವಲ 14 ಕಿಮೀ
ಇರುವುದರಿಂದ ಅತೀ ಪ್ರಮುಖ
ಜಿಯೋಪಾಲಿಟಿಕಲ್ ಪ್ರದೇಶವಾಗಿದೆ.
ಮಧ್ಯ ಧರಾ ಸಮುದ್ರವು ಕೇವಲ ಭೌಗೋಳಿಕ ಗಡಿಯಲ್ಲ, ಇದು ಪ್ರಾಚೀನ ನಾಗರಿಕತೆಗಳ ಅಭಿವೃದ್ಧಿಗೆ ಕೇಂದ್ರವಾಗಿಯೂ ಪರಿಣಮಿಸಿತು. ಗ್ರೀಕ್ ನಾಗರಿಕತೆ,ರೋಮನ್ ಸಾಮ್ರಾಜ್ಯ,ಪ್ರಾಚೀನ ಈಜಿಪ್ಟ್ ಈ ಎಲ್ಲಾ ನಾಗರಿಕತೆಗಳು ಮಧ್ಯ ಧರಾ ಸಮುದ್ರದ ತೀರವಾಸಿಗಳೇ. ವ್ಯಾಪಾರ, ಸಮುದ್ರ ಸಂಚಾರ, ಸಂಸ್ಕೃತಿಯ ವಿನಿಮಯ.
*
ಮಧ್ಯ ಧರಾ ಸಮುದ್ರವು ವಿಶ್ವದ ಅತ್ಯಂತ ಹಳೆಯ ಮತ್ತು ಸಜೀವವಾದ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿದೆ
.ಯೂರೋಪ್, ಆಫ್ರಿಕಾ, ಮತ್ತು ಏಷ್ಯಾ ದೇಶಗಳ ನಡುವಿನ ವಸ್ತು, ಸಂಸ್ಕೃತಿ ಮತ್ತು ಜ್ಞಾನ ವಿನಿಮಯಕ್ಕೆ ಇದು ಆದ್ಯ ಪ್ರಾಂತ.
* ಪ್ರಾಚೀನ ಕಾಲದಲ್ಲಿಯೇ
ಗೋಧಿ, ಮಸಾಲೆ, ಬಟ್ಟೆ, ಲೋಹಗಳು, ಮತ್ತು ಅಮೂಲ್ಯ ವಸ್ತುಗಳು
ಈ ಸಮುದ್ರದ ಮೂಲಕ ಸಾಗುತ್ತಿದ್ದವು.ಇಂದಿಗೂ
Suez Canal
ಮೂಲಕ ಈ ಸಮುದ್ರವು ಏಷ್ಯಾ ಮತ್ತು ಯೂರೋಪ್ ನಡುವಿನ ಪ್ರಮುಖ ವ್ಯಾಪಾರ ಸಂಪರ್ಕವಾಗಿದೆ.
* ಮಧ್ಯ ಧರಾ ಸಮುದ್ರವು ಆಫ್ರಿಕಾ ಮತ್ತು ಯೂರೋಪ್ ಖಂಡಗಳನ್ನು ಬೇರ್ಪಡಿಸುವ ಪ್ರಾಕೃತಿಕ ತಡೆಗೋಡೆ ಮಾತ್ರವಲ್ಲ. ಇದು ಮಾನವ ಇತಿಹಾಸ, ವ್ಯಾಪಾರ, ಸಂಸ್ಕೃತಿ, ಪರಿಸರ, ಮತ್ತು ಭೌಗೋಳಿಕ ರಾಜಕೀಯಗಳಲ್ಲಿ ಅಳಿಸಲಾಗದ ಗುರುತು ಮೂಡಿಸಿದೆ.
* ಕಳೆದ ಸಾವಿರಾರು ವರ್ಷಗಳಿಂದ ಮಾನವ ಅಭಿವೃದ್ಧಿಗೆ ಜೀವನಾಡಿಯಂತೆ ಕಾರ್ಯನಿರ್ವಹಿಸಿರುವ ಈ ಸಮುದ್ರ, ಇಂದಿಗೂ ಜಗತ್ತಿನ ಆರ್ಥಿಕತೆ ಮತ್ತು ತಂತ್ರಜ್ಞಾನದ ಕೇಂದ್ರವಾಗಿಯೇ ಉಳಿದಿದೆ.
Take Quiz
Loading...