* ಭಾರತದ 16 ವರ್ಷದ ಬಾಲಕಿ ವಿಶ್ವದ ಅತಿ ಎತ್ತರದ ಶಿಖರವನ್ನು ಹೊಂದಿರುವ ಮೌಂಟ್‌ ಎವರೆಸ್ಟ್‌ ಪರ್ವತವನ್ನು ನೇಪಾಳ ದಿಕ್ಕಿನ ಕಡೆಯಿಂದ ಕಾಮ್ಯಾ ಅವರು ಸಾಧನೆ ಮಾಡಿ ಎತ್ತರದ ಶಿಖರವನ್ನು ಏರಿದ ಅತ್ಯಂತ ಕಿರಿಯ ಭಾರತೀಯ ಪರ್ವತಾರೋಹಿ ಎಂಬ ಹೆಗ್ಗಳಿಕೆನ್ನು ಪಡೆದಿದ್ದಾರೆ.* ಭಾರತೀಯ ನೌಕಾಪಡೆಯ ಅಧಿಕಾರಿಯ ಕಾರ್ತಿಕೇಯನ್‌ ಅವರ ಮಗಳು ಕಾಮ್ಯ ಅವರು ಏಪ್ರಿಲ್ 3 ರಂದು ಮೌಂಟ್‌ ಎವರೆಸ್ಟ್‌ ಏರುವ ಕಾರ್ಯವನ್ನು ಶುರುಮಾಡಿದರು. ಮೇ 20 (ಸೋಮವಾರ)ರಂದು 8,849 ಮೀಟರ್‌ ಮೌಂಟ್ ಎವರೆಸ್ಟ್‌ ಪರ್ವತವನ್ನು ಯಶಸ್ವಿಯಾಗಿ ಏರಿದ್ದಾರೆ.* ಟಾಟಾ ಸ್ಟೀಲ್ ಅಡ್ಡೆಂಚರ್ ಫೌಂಡೇಶನ್ ಭಾರತೀಯ ಹುಡುಗಿ ಕಾಮ್ಯ ಅವರಿಗೆ ಎವರೆಸ್ಟ್ ಶಿಖರವನ್ನು ಏರಲು ದಂಡಯಾತ್ರೆಯನ್ನು ನಡೆಸಲು ಆರ್ಥಿಕ ಮತ್ತು ತಾಂತ್ರಿಕ ವರ್ಗದವರ ಬೆಂಬಲವನ್ನು ನೀಡಿದ್ದರು.* ಮೌಂಟ್ ಎವರೆಸ್ಟ್‌ ಸಾಧಿಸಿದ ವಿಶ್ವದ ಎರಡನೇ ಕಿರಿಯ ಭಾರತ ಪ್ರಥಮ ಸಾಹಸಿಗ ಹಿರಿಮೆ ಕಾಮ್ಯ ಅವರದಾಗಿದೆ. ಮೇ 2019 ರಲ್ಲಿ ಕಾಮ್ಯ ಅವರು ಭೈಗು ಸರೋವರಕ್ಕೆ 14,100 ಅಡಿ ಯಶಸ್ವಿಗೊಳಿಸಿದರು. ಹಿಮಾಚಲ ಪ್ರದೇಶ ಸಾರ್ ಪಾಸ್ ಅನ್ನು13,850 ಅಡಿ ದಾಟಿದ್ದಾರೆ ಎಂದು ನೌಕಾಪಡೆಯ ಪಶ್ಚಿಮ ಕಮಾಂಡ್ ತಿಳಿಸಿದೆ.