Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಜಾಗತಿಕ ಗೌರವ – ಸತತ 2ನೇ ಬಾರಿ ಶ್ರೇಷ್ಠ ಆಗಮನ ಪ್ರಶಸ್ತಿ
Authored by:
Akshata Halli
Date:
28 ಫೆಬ್ರುವರಿ 2026
➤
ಮಂಗಳೂರು:
ಕರಾವಳಿಯ ಹೆಮ್ಮೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (MIA) ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಮಿಂಚಿದೆ. ಎಸಿಐ ವರ್ಲ್ಡ್ (Airports Council International - ACI) ನೀಡುವ 2025ರ ಸಾಲಿನ
'ಜಾಗತಿಕ ಶ್ರೇಷ್ಠ ಆಗಮನ ವಿಮಾನ ನಿಲ್ದಾಣ' (Best Airport at Arrivals – Globally)
ಪ್ರಶಸ್ತಿಗೆ ಮಂಗಳೂರು ನಿಲ್ದಾಣ ಪಾತ್ರವಾಗಿದೆ. ವಿಶೇಷವೆಂದರೆ, ಈ ವಿಭಾಗದಲ್ಲಿ ಈ ಗೌರವ ಪಡೆಯುತ್ತಿರುವುದು ಇದು ಸತತ ಎರಡನೇ ಬಾರಿ (2024 ಮತ್ತು 2025)
➤
2025ರಲ್ಲಿ ವಿಶ್ವಾದ್ಯಂತ ಕೇವಲ
ಆರು ವಿಮಾನ ನಿಲ್ದಾಣಗಳು
ಮಾತ್ರ ಈ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ. ಆಗಮನದ ಸಮಯದಲ್ಲಿ ಪ್ರಯಾಣಿಕರ ಅನುಭವ, ವಲಸೆ ಪ್ರಕ್ರಿಯೆ (Immigration), ಲಗೇಜ್ ವಿತರಣೆ (Baggage Delivery), ನಿಲ್ದಾಣದ ಸ್ವಚ್ಛತೆ ಮತ್ತು ಒಟ್ಟಾರೆ ಸೌಕರ್ಯಗಳನ್ನು ಆಧರಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಇದು ಪ್ರಯಾಣಿಕರು ನೀಡಿದ ನೈಜ ಸಮಯದ ಪ್ರತಿಕ್ರಿಯೆ (Real-time feedback) ಮತ್ತು ಎಎಸ್ಕ್ಯೂ (ASQ) ಸಮೀಕ್ಷೆಯ ಆಧಾರದ ಮೇಲೆ ನೀಡಲಾಗುವ ಅತ್ಯಂತ ವಿಶ್ವಾಸಾರ್ಹ ಪ್ರಶಸ್ತಿಯಾಗಿದೆ.
➤
ASQ ಪ್ರಶಸ್ತಿ:
ಏರ್ಪೋರ್ಟ್ ಸರ್ವಿಸ್ ಕ್ವಾಲಿಟಿ (ASQ) ಪ್ರಶಸ್ತಿಗಳು ವಿಮಾನಯಾನ ಉದ್ಯಮದಲ್ಲಿ ಗ್ರಾಹಕ ತೃಪ್ತಿಯನ್ನು ಅಳೆಯುವ ಅತ್ಯಂತ ಪ್ರತಿಷ್ಠಿತ ಮಾನದಂಡಗಳಾಗಿವೆ. ವಿಮಾನ ನಿಲ್ದಾಣಗಳಲ್ಲಿನ ಸೇವೆಗಳ ಗುಣಮಟ್ಟವನ್ನು ಸುಧಾರಿಸಲು ಇದು ಪ್ರೇರಣೆ ನೀಡುತ್ತದೆ.
➤
ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (AAHL):
ಮಂಗಳೂರು ವಿಮಾನ ನಿಲ್ದಾಣವನ್ನು ಭಾರತದ ಅತಿದೊಡ್ಡ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕ ಸಂಸ್ಥೆಯಾದ
ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್
ನಿರ್ವಹಿಸುತ್ತಿದೆ. ಡಿಜಿಟಲ್ ಉಪಕ್ರಮಗಳು, ಸಿಬ್ಬಂದಿ ತರಬೀತಿ ಮತ್ತು ಮೂಲಸೌಕರ್ಯಗಳ ಆಧುನೀಕರಣವು ಈ ಸಾಧನೆಗೆ ಪ್ರಮುಖ ಕಾರಣ ಎಂದು ಸಂಸ್ಥೆ ತಿಳಿಸಿದೆ.
➤
ಆಗಸ್ಟ್ 31 ರಿಂದ ಸೆಪ್ಟೆಂಬರ್ 4 ರವರೆಗೆ ನಡೆಯಲಿರುವ ಎಸಿಐ ವರ್ಲ್ಡ್ನ
'ಏರ್ಪೋರ್ಟ್ ಎಕ್ಸ್ಪೀರಿಯನ್ಸ್ ಸಮ್ಮಿಟ್'
ನ ಭಾಗವಾಗಿ, ಈ ಪ್ರಶಸ್ತಿಗಳನ್ನು ಸೆಪ್ಟೆಂಬರ್ 2, 2026 ರಂದು ಟರ್ಕಿಯ ಇಸ್ತಾನ್ಬುಲ್ನಲ್ಲಿ ನಡೆಯುವ ಅಧಿಕೃತ ಎಎಸ್ಕ್ಯೂ (ASQ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿತರಿಸಲಾಗುವುದು; ಈ ವರ್ಷ ವಿಶ್ವಾದ್ಯಂತ ವಿವಿಧ ವಿಭಾಗಗಳಲ್ಲಿ 100 ವಿಮಾನ ನಿಲ್ದಾಣಗಳನ್ನು ಗುರುತಿಸಲಾಗಿದ್ದು, ಒಟ್ಟು 195 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
Take Quiz
Loading...