➤ ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ದೇವೇಂದ್ರ ಫಡ್ನವೀಸ್ ಅವರು 2026-27ನೇ ಸಾಲಿನ ಬಜೆಟ್ ಅನ್ನು ಮಾರ್ಚ್ 6ರಂದು ಮಂಡಿಸಿದ್ದಾರೆ. ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬಜೆಟ್‌ನಲ್ಲಿ ರೈತರಿಗೆ ಬಂಪರ್ ಕೊಡುಗೆ, ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ➤ ಮಹಾರಾಷ್ಟ್ರ ಬಜೆಟ್ 2026-27: ಅಂಕಿ-ಅಂಶಗಳ ನೋಟ:ಒಟ್ಟು ಬಜೆಟ್ ಗಾತ್ರ : ₹7,69,467 ಕೋಟಿಕಂದಾಯ ಸ್ವೀಕೃತಿ : ₹6,16,099 ಕೋಟಿಕಂದಾಯ ವೆಚ್ಚ : ₹6,56,651 ಕೋಟಿಕಂದಾಯ ಕೊರತೆ: ₹40,552 ಕೋಟಿ (GSDPಯ 1% ಕ್ಕಿಂತ ಕಡಿಮೆ)ವಿತ್ತೀಯ ಕೊರತೆ : ₹1,50,491 ಕೋಟಿ (GSDPಯ 3% ಒಳಗೆ)ರಾಜ್ಯದ ಒಟ್ಟು ಸಾಲ : ₹11,02,654 ಕೋಟಿ (ಅಂದಾಜು)GSDP ಅಂದಾಜು (2026-27): ₹54.13 ಲಕ್ಷ ಕೋಟಿ➤ ರೈತರಿಗೆ ₹2 ಲಕ್ಷದವರೆಗೆ ಸಾಲ ಮನ್ನಾ: ಬಜೆಟ್‌ನಲ್ಲಿ ಘೋಷಿಸಲಾದ 'ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳ್ಕರ್ ರೈತರ ಸಾಲ ಮನ್ನಾ ಯೋಜನೆ'ಯ ಅಡಿಯಲ್ಲಿ, ಸೆಪ್ಟೆಂಬರ್ 3, 2025ಕ್ಕಿಂತ ಮೊದಲು ₹2 ಲಕ್ಷದವರೆಗೆ ಸಾಲ ಪಡೆದ ಸುಮಾರು 28 ರಿಂದ 30 ಲಕ್ಷ ರೈತರ ಸಾಲವನ್ನು ಮನ್ನಾ ಮಾಡಲಾಗುವುದು ಮತ್ತು ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದವರಿಗೆ ₹50,000 ಪ್ರೋತ್ಸಾಹಧನ ನೀಡುವ ಜೊತೆಗೆ, ಪಾರದರ್ಶಕತೆಗಾಗಿ 'ಅಗ್ರಿಸ್ಟಾಕ್' ಮೂಲಕ ರೈತರ ಐಡಿ (Farmer ID) ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.➤ ಮೂಲಸೌಕರ್ಯ ಮತ್ತು ಮುಂಬೈ 3.0 / 4.0: ಬಜೆಟ್ 2026ರಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ರಾಜ್ಯಾದ್ಯಂತ 1000 ಕಿ.ಮೀ ಮೆಟ್ರೋ ಮಾರ್ಗ ಮತ್ತು 6000 ಕಿ.ಮೀ ದ್ವಿಪಥ ಹೆದ್ದಾರಿಗಳ ಅಭಿವೃದ್ಧಿ, 1000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಎಲ್ಲಾ ಹಳ್ಳಿಗಳಿಗೆ ಕಾಂಕ್ರೀಟ್ ರಸ್ತೆ ಸಂಪರ್ಕ, ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ವಿಸ್ತರಣೆಗಾಗಿ 'ಮುಂಬೈ 3.0' ಮತ್ತು 'ಮುಂಬೈ 4.0' ವಲಯಗಳ ಸ್ಥಾಪನೆ ಹಾಗೂ ಸೆಪ್ಟೆಂಬರ್ 2026ರ ವೇಳೆಗೆ ಶಿವಡಿಯಿಂದ ಕೋಸ್ಟಲ್ ರೋಡ್‌ವರೆಗೆ ಸಿಗ್ನಲ್ ಮುಕ್ತ ಸಂಚಾರ ಕಾರಿಡಾರ್ ನಿರ್ಮಿಸುವ ಬೃಹತ್ ಯೋಜನೆಗಳನ್ನು ಘೋಷಿಸಲಾಗಿದೆ.➤ ಇಂಧನ ಮತ್ತು ಪರಿಸರ: ರೈತರಿಗಾಗಿ ಸೌರಶಕ್ತಿ ಯೋಜನೆಗಳಿಗೆ ₹20,000 ಕೋಟಿ ಅನುದಾನ. ಮತ್ತು ವಸತಿ ಯೋಜನೆಗಳ ಅಡಿಯಲ್ಲಿ ರೂಫ್‌ಟಾಪ್ ಸೋಲಾರ್ ಅಳವಡಿಕೆಗೆ ಭಾರಿ ಸಬ್ಸಿಡಿ ಘೋಷಿಸಲಾಗಿದೆ.➤ ಮಹಾರಾಷ್ಟ್ರದ ಕೈಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಪ್ರಗತಿಗಾಗಿ ಗ್ಲೋಬಲ್ ಕಾಂಪಿಟೆನ್ಸ್ ಸೆಂಟರ್ (GCC) ಮೂಲಕ 4 ಲಕ್ಷ ಉದ್ಯೋಗಗಳ ಸೃಷ್ಟಿ, ಹೊಸ ಬಿದಿರು ನೀತಿಯಡಿ ₹50,000 ಕೋಟಿ ಹೂಡಿಕೆ ಆಕರ್ಷಿಸಿ 5 ಲಕ್ಷ ಜನರಿಗೆ ಉದ್ಯೋಗ ನೀಡುವುದು ಮತ್ತು ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯನ್ನು 16 ಕೋಟಿಯಿಂದ 38 ಕೋಟಿಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಈ ಬಜೆಟ್‌ನಲ್ಲಿ ರೂಪಿಸಲಾಗಿದೆ.➤ ಸ್ಟಾಂಪ್ ಡ್ಯೂಟಿ (Stamp Duty) ನಿಯಮದಲ್ಲಿ ಬದಲಾವಣೆ: ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಮನೆ ಖರೀದಿಯ ಸಮಯದಲ್ಲಿ ಸ್ಟಾಂಪ್ ಡ್ಯೂಟಿ ಪಾವತಿಯಲ್ಲಿನ ಕೊರತೆಗೆ ವಿಧಿಸುವ ಕನಿಷ್ಠ ದಂಡವನ್ನು ₹5,000 ರಿಂದ ₹1 ಲಕ್ಷಕ್ಕೆ ಏರಿಸಲು ನಿರ್ಧರಿಸಲಾಗಿದೆ. ಇದು ಅಕ್ರಮಗಳನ್ನು ತಡೆಯಲು ಮತ್ತು ಆದಾಯ ಹೆಚ್ಚಿಸಲು ಸರ್ಕಾರ ಕೈಗೊಂಡ ಕ್ರಮವಾಗಿದೆ.