* ಗರ್ಭಿಣಿಯರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುತ್ತಿರುವ ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ಇಂದು (ಜನವರಿ 22) ರಾಯಚೂರಿನಲ್ಲಿ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಿದ್ದಾರೆ.* ಪ್ರತಿ ತಿಂಗಳ 9ಮತ್ತು 24ನೇ ತಾರೀಕಿನಂದು ಎರಡು ಬಾರಿ ಉಚಿತವಾಗಿ ಗರ್ಭಿಣಿಯರ ಆರೋಗ್ಯ ತಪಾಸಣೆಯನ್ನು ಆರೋಗ್ಯ ಇಲಾಖೆ ನಡೆಸಲಿದೆ.* ರಾಜ್ಯದಾದ್ಯಂತ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ಅಭಿಯಾನವನ್ನು ಕಡ್ಡಾಯವಾಗಿ, ನಿರಂತರವಾಗಿ ನಡೆಸಲು ಸೂಚನೆ ನೀಡಲಾಗಿದೆ.* ಮಾತೃತ್ವ ಸುರಕ್ಷಾ ಅಭಿಯಾನದಲ್ಲಿ ಗರ್ಭಿಣಿಯರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಆರೋಗ್ಯ ಇಲಾಖೆ ಕ್ರಮ ವಹಿಸುತ್ತಿದೆ. ಅಭಿಯಾನದ ಮೂಲಕ ಗುಣಾತ್ಮಕ ಹೆರಿಗೆ ಸೇವೆಗಳು ಒದಗಿಸಿ, ಪ್ರತಿ ಗರ್ಭಿಣಿಗೆ ಜನನ ಯೋಜನೆ ಮುಂಚಿತವಾಗಿ ಖಚಿತಪಡಿಸಲಾಗುತ್ತದೆ.* ಗರ್ಭಧಾರಣೆಯ ಮೊದಲ 3 ತಿಂಗಳಿನಲ್ಲಿ ಪೋಲಿಕ್ ಆಮ್ಲ ಮತ್ತು 500 ಎಂಸಿಜಿ ಕ್ಯಾಲ್ಸಿಯಂ ನೀಡಲಾಗುತ್ತದೆ. ಗರ್ಭಧಾರಣೆಯ 14ನೆ ವಾರದಿಂದ ಹೆರಿಗೆ ಮತ್ತು 6 ತಿಂಗಳ ನಂತರ ಕ್ಯಾಲ್ಸಿಯಂ ಮುಂದುವರಿಯುತ್ತದೆ. ಗರ್ಭಾವಸ್ಥೆಯ ಮಧುಮೇಹವನ್ನು ತಪಾಸಿಸಲು ಓರಲ್ ಗ್ರೂಕೋಸ್ ಟಾಲರೆನ್ಸ್ ಟೆಸ್ಟ್ನ್ನು ಬಳಸಲಾಗುತ್ತದೆ, ಮತ್ತು 3ನೆ ತ್ರೈಮಾಸಿಕದಲ್ಲಿ ಪಿಡಬ್ಲ್ಯೂಗಳ ಲೈನ್ ಪಟ್ಟಿ ಮಾಡಲಾಗುತ್ತದೆ.