* ಕಳೆದ ಕೆಲವು ದಿನಗಳಿಂದ ಕಣಿವೆಯ ಎತ್ತರದ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುತ್ತಿರುವುದರಿಂದ, ಖೇಲೋ ಇಂಡಿಯಾ ವಿಂಟರ್ ಗೇಮ್ಸ್ (KIWG) 2025 ಮಾರ್ಚ್ 9 ರಿಂದ 12 ರವರೆಗೆ ಕಾಶ್ಮೀರದ ಗುಲ್ಮಾರ್ಗ್ನಲ್ಲಿ ನಡೆಯಲಿದೆ .* ಫೆಬ್ರವರಿ 22 ರಿಂದ 25 ರವರೆಗೆ ನಡೆಯಬೇಕಿದ್ದ ಚಳಿಗಾಲದ ಕ್ರೀಡಾಕೂಟವನ್ನು ಗುಲ್ಮಾರ್ಗ್ನಲ್ಲಿ ಹಿಮದ ಕೊರತೆಯಿಂದಾಗಿ ಮುಂದೂಡಲಾಯಿತು.* "ನಾವು ಮಾರ್ಚ್ 9 ರಿಂದ 12 ರವರೆಗೆ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2025 ಅನ್ನು ಆಯೋಜಿಸಲು ಸಜ್ಜಾಗಿದ್ದೇವೆ. ದೇಶಾದ್ಯಂತದ ಉನ್ನತ ಚಳಿಗಾಲದ ಕ್ರೀಡಾಪಟುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ" ಎಂದು ಜಮ್ಮು ಮತ್ತು ಕಾಶ್ಮೀರ ಕ್ರೀಡಾ ಮಂಡಳಿ ಕಾರ್ಯದರ್ಶಿ ನುಜತ್ ಗುಲ್ ಪಿಟಿಐಗೆ ತಿಳಿಸಿದ್ದಾರೆ.* ಇದು ಚಳಿಗಾಲದ ಕ್ರೀಡಾ ಉತ್ಸವದ ದ್ವಿತೀಯ ಹಂತವಾಗಿದ್ದು, ಸ್ಕೀಯಿಂಗ್ ಮತ್ತು ಸ್ನೋಬೋರ್ಡಿಂಗ್ ಪೈಪೋಟಿಗಳು ನಡೆಯಲಿವೆ.* ಈ ವರ್ಷದ ಜನವರಿಯಲ್ಲಿ ಲಡಾಖ್ನ ಲೇಹ್ ಜಿಲ್ಲೆಯಲ್ಲಿಯೇ ಪ್ರಥಮ ಹಂತದ ಕ್ರೀಡಾ ಉತ್ಸವ ನಡೆದಿದ್ದು, ಅಲ್ಲಿ ಕ್ರೀಡಾಪಟುಗಳು ಹಿಮ-ಸ್ಕೇಟಿಂಗ್ ಮತ್ತು ಹಿಮ-ಹಾಕಿ ಪೈಪೋಟಿಗಳಲ್ಲಿ ಭಾಗವಹಿಸಿದರು.