* ಚಲನಚಿತ್ರ ಗೀತೆಗಳು ಸೇರಿದಂತೆ ವಿವಿಧ ಪ್ರಕಾರದ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿರುವ, ಸಂಗೀತವೇ ಮೂರ್ತಿವೆತ್ತಂತಿರುವ ಸ್ವರ ಮಾಂತ್ರಿಕ ಇಳೆಯರಾಜ ಅವರು ಮಾರ್ಚ್ 8ರಂದು ಲಂಡನ್‌ನಲ್ಲಿ ನಡೆಯುವ ‘ಸಿಂಫನಿ’ಯನ್ನು (ವಾದ್ಯಮೇಳ) ಮುನ್ನಡೆಸಲಿದ್ದಾರೆ.* ಲಂಡನ್‌ನ ‘ಇವೆಂಟಿಮ್ ಅಪೋಲೊ’ ಸಭಾಂಗಣದಲ್ಲಿ ನಡೆಯುವ ಸ್ವರಸಮ್ಮೇಳನದಲ್ಲಿ, ಇಳೆಯರಾಜ ಅವರ ಚೊಚ್ಚಲ ಸ್ವರಸಂಯೋಜನೆ ‘ವ್ಯಾಲಿಯಂಟ್’ ಅನಾವರಣಗೊಳ್ಳಲಿದೆ.* ಪಾಶ್ಚಾತ್ಯ ಶಾಸ್ತ್ರೀಯ ವಾದ್ಯಮೇಳವನ್ನು ಬ್ರಿಟನ್‌ನಲ್ಲಿ ನಿರ್ವಹಿಸಿದ ಮೊದಲ ಭಾರತೀಯ ಕಲಾವಿದ ಎಂಬ ಗೌರವಕ್ಕೆ 81 ವರ್ಷದ ಇಳೆಯರಾಜ ಪಾತ್ರರಾಗಲಿದ್ದಾರೆ. ಈ ಮೂಲಕ, ಅವರು, ಸಂಗೀತ ಕ್ಷೇತ್ರದಲ್ಲಿನ ಸುದೀರ್ಘ ಪಯಣದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಲಿದ್ದಾರೆ.* ಈ ಕುರಿತು ಮಾತನಾಡಿದ ಇಳೆಯರಾಜ ‘ಇದು ನನಗೆ ಮಾತ್ರ ಹೆಮ್ಮೆಯ ವಿಷಯವಲ್ಲ; ಇಂತಹ ಗೌರವ ಸಿಕ್ಕಿರುವುದು ಭಾರತದ ಪಾಲಿಗೂ ಹೆಮ್ಮೆಯ ವಿಚಾರ’ ಎಂದಿದ್ದಾರೆ. * ಕೇವಲ 35 ದಿನಗಳಲ್ಲಿ ಇಳೆಯರಾಜ ಅವರು ಈ ಸ್ವರಸಂಯೋಜನೆ ಮಾಡಿದ್ದು, ಖ್ಯಾತ ಸಂಗೀತಗಾರ ಮೈಕೆಲ್ ಟಾಮ್ಸ್ ಈ ವಾದ್ಯಗೋಷ್ಠಿ ನಿರ್ವಹಿಸುವರು.