* ಜಗತ್ತಿನಾದ್ಯಂತ ಪ್ರತಿವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.* 2025ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಥೀಮ್ "ಕ್ರಿಯೆಯನ್ನು ವೇಗಗೊಳಿಸಿ."* ಮಹಿಳಾ ದಿನಾಚರಣೆ ಮೂಲಕ ಲಿಂಗ ಸಮಾನತೆ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಬಲವಾಗಿ ಸಾರಲು ಈ ದಿನ ಒಂದು ದೊಡ್ಡ ವೇದಿಕೆ ಆಗಿರುತ್ತದೆ. * ನಂತರ 1910 ರಲ್ಲಿ ಕೋಪನ್ ಹ್ಯಾಗನ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಕ್ಲಾರಾ ಜೆಟ್ಕಿನ್ ಅವರು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಪ್ರಸ್ತಾಪಿಸಿದರು. ಈ ಕಲ್ಪನೆಯು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿತು. * 1911 ರಲ್ಲಿ ಹಲವಾರು ಯುರೋಪಿಯನ್ ರಾಷ್ಟ್ರಗಳಲ್ಲಿ ಮೊದಲ ಆಚರಣೆಗೆ ಕಾರಣವಾಯಿತು. ಅಂದಿನಿಂದ ಜಗತ್ತಿನಾದ್ಯಂತ ಮಾರ್ಚ್ 8 ಅನ್ನು ಮಹಿಳಾ ದಿನವನ್ನು ಆಚರಿಸಲಾಗುತ್ತದೆ.* ಮೊದಲ ಮಹಿಳಾ ದಿನವನ್ನು ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ಪಿಟ್ಟರ್‌ಲೆಂಡ್‌ನಲ್ಲಿ 1911ರ ಮಾರ್ಚ್ 19ರಂದು ಆಚರಿಸಲಾಯಿತು* ವಿಶ್ವಸಂಸ್ಥೆಯ (UN) ಥೀಮ್: " ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗಾಗಿ: ಹಕ್ಕುಗಳು, ಸಮಾನತೆ ಮತ್ತು ಸಬಲೀಕರಣ." * ಮಹಿಳಾ ದಿನದ ಮಹತ್ವ: ಅಂತಾರಾಷ್ಟ್ರೀಯ ಮಹಿಳಾ ದಿನವು ಲಿಂಗ ಸಮಾನತೆ ಮತ್ತು ಮಹಿಳಾ ಹಕ್ಕುಗಳ ಕುರಿತಾಗಿ ಹೆಚ್ಚು ಮಹತ್ವ ಹೊಂದಿದೆ. ವಿಶ್ವಾದ್ಯಂತ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲು ಇದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ* ಮಹಿಳಾ ದಿನವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಲು ಖಂಡಿತಾ ಸಾಧ್ಯವಿಲ್ಲ. ಯಾಕೆಂದರೆ, ಮನೆ, ಕುಟುಂಬ, ಕಚೇರಿ, ಮಕ್ಕಳು, ಕೆಲಸ ಹೀಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಹೆಣ್ಣಿನ ಶಕ್ತಿಗೆ ಅದರದ್ದೇ ಆದ ಮಹತ್ವವಿದೆ. ಇದೇ ಕಾರಣಕ್ಕೆ ಹೆಣ್ಣಿಗೆ ಒಂದು ದಿನ ಮೀಸಲಿಟ್ಟು ಆಕೆಯ ಶ್ರಮ, ನಿಸ್ವಾರ್ಥ ಕೆಲಸವನ್ನು ಗೌರವಿಸಲಾಗುತ್ತದೆ. - ಇದರ ಪ್ರಮುಖ ಅಂಶಗಳು:✅ ಮಹಿಳಾ ಸಮಾನತೆಯ ಪರ ಧ್ವಜ: ಮಹಿಳೆಯರ ಹಕ್ಕುಗಳು, ಉದ್ಯೋಗದಲ್ಲಿ ಸಮಾನ ವೇತನ, ಶೈಕ್ಷಣಿಕ ಪ್ರಗತಿ ಮತ್ತು ರಾಜಕೀಯ ಹಕ್ಕುಗಳ ಕುರಿತ ಚರ್ಚೆಗಳು ಮುಂದುವರೆದಿವೆ.✅ ವಿವಿಧ ಕಾರ್ಯಕ್ರಮಗಳು: ಪ್ರಪಂಚದಾದ್ಯಂತ ವಿವಿಧ ಸಮ್ಮೇಳನಗಳು, ಕಾರ್ಯಾಗಾರಗಳು, ರ್ಯಾಲಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.✅ ಭಾರತದಲ್ಲಿ ವಿಶೇಷ ಕಾರ್ಯಕ್ರಮ: ಪ್ರಧಾನಿ / ರಾಷ್ಟ್ರಪತಿಗಳಿಂದ ಮಹಿಳಾ ಸಾಧಕರಿಗೆ ಗೌರವ, ಮಹಿಳಾ ಸಮಾನತೆಗೆ ಸಂಬಂಧಿಸಿದ ಹೊಸ ಯೋಜನೆಗಳ ಘೋಷಣೆ.- ಈ ದಿನದ ಪ್ರಾಮುಖ್ಯತೆ:✅ ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು✅ ಲಿಂಗ ಸಮಾನತೆಗಾಗಿ ಪ್ರೇರಣೆ ನೀಡುವುದು✅ ಮಹಿಳೆಯರ ಸಾಧನೆಗಳನ್ನು ಗೌರವಿಸುವುದು✅ ಅವರಿಗೆ ಉತ್ತಮ ಅವಕಾಶಗಳ ಬಗ್ಗೆ ಪ್ರೋತ್ಸಾಹ ನೀಡುವುದು