* ರಂಗಭೂಮಿ ಕಲೆಯನ್ನು ಉಳಿಸಿ, ಬೆಳೆಸಲು, ಕಲಾವಿದರನ್ನು ಗೌರವಿಸಲು ಪ್ರತಿವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನವನ್ನಾಗಿ ದಿನ ಆಚರಿಸಲಾಗುತ್ತದೆ.* 1962ರ ಮಾರ್ಚ್ 27ರಂದು ಪ್ಯಾರಿಸ್ನಲ್ಲಿ 'ಥಿಯೇಟರ್ ಆಫ್ ನೇಷನ್ಸ್' ಅಸ್ತಿತ್ವಕ್ಕೆ ಬಂದ ನೆನಪಿಗಾಗಿ ಪ್ರತಿವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನವನ್ನಾಗಿ ಆಚರಿಸಲು ಅಂತಾರಾಷ್ಟ್ರೀಯ ರಂಗಭೂಮಿ (ಐಟಿಐ) ಸಂಸ್ಥೆ ನಿರ್ಧರಿಸಿತು.* 1961ರಲ್ಲಿ ವಿಯೆನ್ನಾದಲ್ಲಿ ನಡೆದ 9ನೇ ವಿಶ್ವ ಕಾಂಗ್ರೆಸ್ನಲ್ಲಿ ಮೊತ್ತಮೊದಲ ಬಾರಿಗೆ ವಿಶ್ವರಂಗಭೂಮಿ ದಿನವನ್ನು ಆಚರಿಸುವ ವಿಷಯವನ್ನು ಪ್ರಸ್ತಾಪಿಸಿ ಅನುಮೋದನೆ ಪಡೆಯಲಾಯಿತು.* ಕೆಲವು ರಂಗಭೂಮಿ ಮತ್ತು ನೃತ್ಯಕ್ಷೇತ್ರದ ಪರಿಣತರು ಸೇರಿ 1948ರಲ್ಲಿ ಇಂಟರ್ ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್ (ಐಟಿಐ) ಸ್ಥಾಪಿಸಿದರು. ಇದರ ಪ್ರಧಾನ ಕಚೇರಿ ಪ್ಯಾರಿಸ್ನಲ್ಲಿದೆ. * ಈ ಸಂಸ್ಥೆಯನ್ನು ಯುನೆಸ್ಕೋ ಮೇಲ್ವಿಚಾರಣೆ ಮಾಡುತ್ತಿದೆ. ಐಟಿಐ ನೂರಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಕೇಂದ್ರಗಳನ್ನು ತೆರೆದಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಠ್ಯಕ್ರಮಗಳನ್ನು ಆಯೋಜಿಸುತ್ತದೆ.* ಜಗತ್ತಿನ ರಂಗಭೂಮಿ ಕಲಾವಿದರ ಏಕತೆಯನ್ನು ಪ್ರತಿಪಾದಿಸಲು ಮತ್ತು ಪ್ರದರ್ಶನ ಕಲೆಯ ಜಾಗತಿಕ ಅರಿವು ಮೂಡಿಸಲು ವಿಶ್ವರಂಗಭೂಮಿ ದಿನವನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ಪ್ರಖ್ಯಾತ ನಟ, ನಾಟಕಕಾರ ಅಥವಾ ನಿರ್ದೇಶಕರಿಂದ ಒಂದು ಸಂದೇಶ ನೀಡಲಾಗುತ್ತದೆ. 2002ರಲ್ಲಿ ಗಿರೀಶ್ ಕಾರ್ನಾಡ್ ಅವರು ಈ ಸಂದೇಶ ನೀಡಿದ್ದರು.