* ಅಮೆರಿಕ ಅಧಿಕಾರಿಗಳ ನಿಯೋಗವು ಮಾರ್ಚ್ 25-29ರಂದು ಭಾರತೀಯ ಅಧಿಕಾರಿಗಳೊಂದಿಗೆ ವ್ಯಪರ ಮಾತುಕತೆಗಾಗಿ ಭಾರತಕ್ಕೆ ಭೇಟಿ ನೀಡಿ ಭಾರತೀಯ ಅಧಿಕಾರಿಗಳೊಂದಿಗೆ ವ್ಯಾಪಾರ ಮಾತುಕತೆ ನಡೆಸಲಿದೆ ಎಂದು ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.* ಅಮೆರಿಕ ಅಧಿಕಾರಿಗಳ ನಿಯೋಗವನ್ನು ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ವ್ಯಾಪಾರ ಪ್ರತಿನಿಧಿ ಬ್ರೆಂಡನ್ ಲಿಂಚ್ ನೇತೃತ್ವ ವಹಿಸಿದ್ದಾರೆ.* ‘ಈ ಭೇಟಿ ಭಾರತದೊಂದಿಗೆ ಉತ್ಪಾದನೆ ಮತ್ತು ಸಮತೋಲಿತ ವ್ಯಾಪಾರ ಸಂಬಂಧ ಹೆಚ್ಚಿಸಲು ಅಮೆರಿಕದ ಬದ್ಧತೆಯನ್ನು ತೋರಿಸುತ್ತದೆ ಎಂದು ವಕ್ತಾರರು ತಿಳಿಸಿದ್ದಾರೆ.* ‘ಅಮೆರಿಕವು ವಾಣಿಜ್ಯ ಮತ್ತು ಹೂಡಿಕೆ ಒಪ್ಪಂದವನ್ನು ಗೌರವಿಸಿ ರಚನಾತ್ಮಕವಾಗಿ ಮುಂದುವರಿಯಲು ಎದುರು ನೋಡುತ್ತಿದೆ.* ಏಪ್ರಿಲ್ 2ರಿಂದ ಭಾರತದಿಂದ ಆಮದು ಮಾಡುವ ಕೆಲವು ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಘೋಷಣೆಯ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆಯುತ್ತದೆ